
ನವದೆಹಲಿ: ಕ್ರೌರ್ಯದ ಆಧಾರದ ಮೇಲೆ ಪತಿ ವಿಚ್ಛೇದನ ಕೋರಿರುವ ವೈವಾಹಿಕ ಪ್ರಕರಣ ವೊಂದರ ವಿಚಾರಣೆ ನಡೆಸಿದ ನ್ಯಾ| ಸಂದೀಪ್ ಮೆಹ್ತಾ ಹಾಗೂ ನ್ಯಾ| ವಿಕ್ರಂ ನಾಥ್ ಅವರಿದ್ದ ಪೀಠವು, ಪತ್ನಿ ಕೆಲಸದಾಕೆಯಲ್ಲ, ಮನೆ ಕೆಲಸವನ್ನು ಪತಿಯೂ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಶುಕ್ರವಾರ ಪತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯ ಪೀಠವು “ಪತ್ನಿ ಮನೆ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕ್ರೌರ್ಯಕ್ಕೆ ಸಮನಾಗುವುದಿಲ್ಲ. ನೀವು ಸೇವಕಿಯನ್ನು ಮದುವೆಯಾಗಿಲ್ಲ, ಜೀವನ ಸಂಗಾತಿಯನ್ನು ಮದುವೆಯಾಗಿದ್ದೀರಿ. ಆದ್ದರಿಂದ ನೀವು ಸಹ ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಸೇರಿದಂತೆ ಮನೆ ಕೆಲಸವನ್ನು ಮಾಡಬೇಕು” ಎಂದು ತಿಳಿಸಿದೆ.






















































