
ಬೆಂಗಳೂರು: ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿ ವೈದ್ಯೆಯಾಗಿದ್ದ ಕೃತಿಕಾ ರೆಡ್ಡಿಯನ್ನು ವೈದ್ಯ ವಿದ್ಯೆಯನ್ನು ಬಳಸಿ ಕೊಲೆ ಮಾಡಿದ್ದು ಇದೀಗ ತನಿಖೆಯ ವೇಳೆ ಆತನ ಕರಾಳ ಮುಖ ಬಯಲಾಗುತ್ತಿದೆ.
ವೃತ್ತಿಯಲ್ಲಿ ಇಬ್ಬರೂ ವೈದ್ಯರಾಗಿದ್ದು ಮಹೇಂದ್ರ ರೆಡ್ಡಿಗೆ ಮದುವೆಗೂ ಮುನ್ನ ಮತ್ತು ಮದುವೆ ನಂತರವು ಬೇರೆ ಬೇರೆ ಯುವತಿಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ವಿಚಾರ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಆರೋಪಿಯ ಅಕ್ರಮ ಸಂಬಂಧದ ಬಗ್ಗೆ ಕೃತಿಕಾ ಪೋಷಕರು ಕೂಡ ಆರೋಪಿಸಿದ್ದು ಮುಂಬೈ, ಬೆಂಗಳೂರು ಸೇರಿ ಹತ್ತಿರ ಹತ್ತಿರ ಅರ್ಧ ಡಜನ್ ಹೆಣ್ಣುಮಕ್ಕಳ ಜೊತೆ ಚೆಲ್ಲಾಟ ಆಡಿರುವ ವಿಚಾರ ಪೊಲೀಸರ ತನಿಖೆಯಿಂದ ಬಯಲಾಗಿದೆ. ಪೊಲೀಸರು ಈಗ ಅಕ್ರಮ ಸಂಬಂಧದ ಕಾರಣಕ್ಕಾಗಿ ಹತ್ಯೆ ಮಾಡಿದ್ದಾನಾ ಎನ್ನುವುದನ್ನು ದೃಢಪಡಿಸಲು ಆರೋಪಿಯ ಪೋನ್ ಸಿಡಿಆರ್, ಕಾಲ್ ಲಿಸ್ಟ್ ಬಗ್ಗೆ ಮಾಹಿತಿ ಪಡೆದುಕೊಳ್ಳಲು ತನಿಖೆ ಮುಂದುವರಿಸಿದ್ದಾರೆ.



















































