ಕವನ
ಗಣೇಶ್ ಜಾಲ್ಸೂರು

ಮಕ್ಕಳೇ… ಬನ್ನಿರಿ
ಹೇಳುವೆ ಕೇಳಿರಿ
ಜೀವನ ನೀತಿಯ
ಚೆಂದದ ನುಡಿಯ
ಮಾತಾ ಪಿತರು
ನಮಗೆ ದೇವರು
ನಾವೇ ಅವರಿಗೆ
ಜೀವದ ಉಸಿರು
ಗುರುವು ವಿಧಾತ
ತೋರುತ ಸತ್ಪಥ
ಸುಂದರ ಪಾವನ
ನಮ್ಮಯ ಜೀವನ
ದೇಶವು ಕಾದಿದೆ
ಎಲ್ಲವೂ ನೀಡಿದೆ
ತೀರಿಸಿ ಋಣವ
ತನು ಮನ ಪ್ರಾಣವ
ಇರಲಿ ನಿತ್ಯವು
ನುಡಿಯು ಸತ್ಯವು
ಆಗಲಿ ಮಾತು
ಮೌಲ್ಯದ ಮುತ್ತು…..
ಪ್ರಿಯ ವಿದ್ಯಾರ್ಥಿಗಳೇ
ಮಕ್ಕಳ ದಿನಾಚರಣೆಯ ಶುಭಾಶಯಗಳು























































