ಬೃಹತ್ ರಕ್ತದಾನ ಶಿಬಿರ, ಸ್ತನ ಕ್ಯಾನ್ಸರ್ ನ ಮಾಹಿತಿ ಕಾರ್ಯಾಗಾರ ಹಾಗೂ ತಪಾಸಣಾ ಶಿಬಿರ

ಕಾರ್ಕಳ: ದಿನಾಂಕ 13.07.2025ನೇ ರವಿವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಂಬಾಡಿ ಪದವು ವಿನಲ್ಲಿ ಜನನಿ ಮಿತ್ರ ಮಂಡಳಿ (ರಿ.) ವಾಂಟ್ರಾಯಿಪದವು ರೋಟರಿ ಕ್ಲಬ್ ಕಾರ್ಕಳ, ಜೆ ಸಿ ಐ ಕಾರ್ಕಳ ರೋಟರಿ, ರೋಟಾರಾಕ್ಟ್ ಕ್ಲಬ್, ಕಾರ್ಕಳ ಹಳೆ ವಿದ್ಯಾರ್ಥಿ ಸಂಘ ಕಲಂಬಾಡಿ ಪದವು, ವಿಶ್ವ ಹಿಂದೂ ಪರಿಷತ್ ಸಾಮ್ರಾಟ್ ಬಜರಂಗದಳ ಘಟಕ ಕಲಂಬಾಡಿ ಪದವು, ರೋಟರಿ ಸಮುದಾಯ ದಳ ಕಲಂಬಾಡಿ ಪದವು ಇವರ ನೇತೃತ್ವದಲ್ಲಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ವಿಭಾಗ ಅಜ್ಜರಕಾಡು ಉಡುಪಿ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.
ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಣಿಪಾಲ ಇದರ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಮೊದಲು ಬಂದ 40 ಮಹಿಳೆಯರಿಗೆ ಸ್ತನ ಕ್ಯಾನ್ಸರ್ ನ ಮಾಹಿತಿ ಕಾರ್ಯಗಾರ ಹಾಗೂ ತಪಾಸಣಾ ಶಿಬಿರ ನಡೆಯಲಿದೆ.
ಬೆಳಗ್ಗೆ ಗಂಟೆ 9:00 ರಿಂದ 12:30 ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂದು ವಿವಿಧ ಸಂಘಟನೆಗಳ ಪರವಾಗಿ ವಿನಂತಿಸಲಾಗಿದೆ.
ದೂರವಾಣಿ ಸಂಖ್ಯೆ: 9880197475 /9591513162 /988072681 1