
ಬೆಂಗಳೂರು: ಸೆಪ್ಟೆಂಬರ್ 7ರಂದು ರಾತ್ರಿ ನಭೋ ಮಂಡಲದಲ್ಲಿ ಕೌತುಕದ ರಕ್ತ ಚಂದನ ಚಂದ್ರಗ್ರಹಣ ಸಂಭವಿಸಲಿದ್ದು ಸುದೀರ್ಘ 3 ಗಂಟೆ 28 ನಿಮಿಷಗಳ ಕಾಲ ನಡೆಯುವ ಭೂಮಿ, ಸೂರ್ಯ ಹಾಗೂ ಚಂದ್ರನ ನಡುವಿನ ನೆರಳಿನಾಟಕ್ಕೆ ಭಾರತ ಕೂಡ ಸಾಕ್ಷಿಯಾಗಲಿದೆ.
ಗ್ರಹಣದ ವೇಳೆ ನಮ್ಮಲ್ಲಿ ಗ್ರಹಗತಿಗಳ ಬದಲಾವಣೆ ಆಗುತ್ತೆ ಅನ್ನೋ ನಂಬಿಕೆ ದಟ್ಟವಾಗಿದ್ದು, ಈ ಗ್ರಹಣ ಗರ್ಭಿಣಿಯರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಅನ್ನುವ ನಂಬಿಕೆಯಿದೆ.
ನಾಳೆ ರಾತ್ರಿ ಹುಣ್ಣಿಮೆಯ ಚಂದ್ರ ರಕ್ತಚಂದನದ ರೀತಿ ಗೋಚರಿಸಲಿದ್ದಾನೆ. ಗ್ರಹಣ ಅಂದ್ರೆ ಒಂದು ರೀತಿಯಲ್ಲಿ ಭಯದ ಭಾವನೆ ಇನ್ನೂ ಜನರಲ್ಲಿದೆ. ಅದ್ರೆ ವೈಜ್ಞಾನಿಕವಾಗಿ ನೋಡಿದಾಗ ಇದು ಆಕಾಶದಲ್ಲಿ ನಡೆಯುವ ಒಂದು ಸಹಜ ಪ್ರಕ್ರಿಯೆ. ಚಂದ್ರಗ್ರಹಣದಿಂದ ಸೂಸುವ ಕಿರಣಗಳಿಂದ ಅಷ್ಟಾಗಿ ಯಾವುದೇ ಪರಿಣಾಮ ಬೀರುವುದಿಲ್ಲ.
ಇನ್ನೂ ಜ್ಯೋತಿಷಿಗಳು ಗ್ರಹಣದ ವೇಳೆ ಗರ್ಭಿಣಿಯರ ಮೇಲೆ ಹೆಚ್ಚು ಪರಿಣಾಮ ಪ್ರಭಾವ ಬೀರುತ್ತದೆ ಎಂದು ಹೇಳುತ್ತಾರೆ. ಆದ್ರೆ ವೈಜ್ಞಾನಿಕವಾಗಿ ಅತಂಹ ಯಾವುದೇ ಪರಿಣಾಮ ಬೀರಲ್ಲ ಎಂದು ಸ್ತ್ರೀ ರೋಗ ತಜ್ಞರು ಹೇಳುತ್ತಾರೆ. ಆದರೆ ಗ್ರಹಣದ ಕಾರಣದಿಂದ ನಾರ್ಮಲ್ ಡೆಲಿವರಿಯನ್ನ ತಡೆಯಲು ಸಾಧ್ಯವಿಲ್ಲ. ಸಿ ಸೆಕ್ಷನ್ ಮಾಡಿಸಿಕೊಳ್ಳುವವರು ಗ್ರಹಣದ ದಿನ ಬೇಡ ಆಪರೇಷನ್ ಮುಂದಕ್ಕೆ ಹಾಕಿ ಅಂತಾ ಸಾಕಷ್ಟು ಗರ್ಭಿಣಿಯರು ಕೇಳಿದ್ದಾರೆ ಎಂದು ಸ್ತ್ರೀ ರೋಗ ತಜ್ಞರು ತಿಳಿಸಿದ್ದಾರೆ.