28.1 C
Udupi
Monday, February 2, 2026
spot_img
spot_img
HomeBlogನಾ ಕಂಡ ದಸರಾ

ನಾ ಕಂಡ ದಸರಾ

ಚೇತನ್ ವರ್ಕಾಡಿ

ಭಕ್ತಿ ಶ್ರದ್ಧೆಯೊಳಗೊಂದು ನಾ ಕಂಡ ದಸರಾ
ಎಷ್ಟೊಂದು ಸಡಗರ ಎಷ್ಟೊಂದು ಸಂಭ್ರಮ
ಬಲೂನು ಕೀ ಚೈನು ಬಲು ಒತ್ತಾಯದಿ ಕೊಟ್ಟವ
ಮಾರಿಬಿಟ್ಟ ಖುಷಿಯಲ್ಲಿ ಹಸಿವು ನೀಗಿಸಿದ ದಸರಾ.

ಜಗಮಗಿಸುವ ಜಾತ್ರೆ ಈ ಸುಂದರ ಯಾತ್ರೆ
ಜಗತ್ತೇ ಕೊಂಡಾಡಲು ಬೆಳಕಿನಡಿಯಲಡಗಿದೆ ಬೆವರಿನ ಪಾತ್ರೆ
ಕಡಲೆ ಮಾರುವ ಅಜ್ಜಿಗಿದು ಬದುಕಿನಬ್ಬದ ದಸರಾ
ಕೊಳಲನಿಡಿದ ಕಂದನಿಗೆ ಬದುಕ ರೂಪಿಸುವ ದಸರಾ.

ಮಣ್ಣಿಗೆ ರೂಪ ಕೊಟ್ಟ ಶಿಲ್ಪಿಗಿದು ಅನ್ನ ನೀಡಿದ ದಸರಾ
ಭಕ್ತಿಯೊಳು ಬಂದ ಭಕ್ತನಿಗಿದು ಶಕ್ತಿ ನೀಡಿದ ದಸರಾ
ನವರಾತ್ರಿ ವಿಜಯಯಾತ್ರೆಯಾಗಿ ವಿಜೃಂಭಿಸಿದ ದಸರಾ.

ಚದುರಿನಿಂತ ಆತ್ಮೀಯತೆಗೆ ಪ್ರೀತಿಯ ಚಿಗುರು ನೀಡಿದ ದಸರಾ
ಕಷ್ಟ ನೋವಲಿ ಬೆಂದ ಜೀವಕ್ಕೆ ಸಹಾಯ ಹಸ್ತ ಮಿಡಿದ ದಸರಾ
ಹುಲಿವೇಷದಬ್ಬರದಿ ಘರ್ಜಿಸಿದ ದಸರಾ
ಬೆವರು ಫಲವನ್ನು ಸಾಂತ್ವನದ ಮಡಿಲಿಗರ್ಪಿಸಿದ ದಸರಾ.

ನಾ ಕಂಡ ದಸರಾ ವಿವರಿಸಲಾಗದ ವಿಸ್ಮಯ ಜಗತ್ತು
ಹಸಿವ ತಣಿಸಿತು ಖುಷಿಯ ಪೋಣಿಸಿತು
ಜನಜಂಗುಳಿಯೊಳಗೆ ಜಗತ್ತನ್ನೇ ಮರೆತಂತ ಭಾವ
ಹೇಗೆ ಬರೆದಿಡಲಿ ಬದುಕುತಿದೆ ಅದರೊಳಗೆ ಎಷ್ಟೋಂದು ಜೀವ..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page