ಅಪರಾಧ ರಹಿತ ಸಮಾಜ ನಿರ್ಮಿಸಲು ವಿದ್ಯಾರ್ಥಿ ಜೀವನದಿಂದಲೇ ಸನ್ನದ್ದರಾಗೋಣ – ಸಂತೋಷ್

ವಿದ್ಯಾರ್ಥಿಗಳು ಹೆತ್ತವರಿಗೆ.ಶಿಕ್ಷಕರಿಗೆ. ಗುರು ಹಿರಿಯರಿಗೆ ಗೌರವ ಕೊಡಬೇಕು.ಆಧುನಿಕ ಯುಗದಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಒಳ್ಳೆಯ ವಿಚಾರಗಳ ಬಗ್ಗೆ ಆಸಕ್ತಿ ತೋರಿಸಬೇಕೆ ವಿನಃ. ಅಗತ್ಯ ಇಲ್ಲದ ಕೆಟ್ಟ ವಿಚಾರಗಳಿಂದ ದೂರ ಇರಬೇಕು.ಅತಿಯಾದ ಮೊಬೈಲ್ ಬಳಕೆ ವಿದ್ಯಾರ್ಜನೆಗೆ ತೊಡಕು ಉಂಟು ಮಾಡುತಿದೆ.ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಜಾಗ್ರತರಾಗುವಂತೆ. ಪೋಕ್ಸೋ ಕಾಯ್ದೆ ಬಗ್ಗೆ. ಮಾದಕ ವ್ಯ ಸ ನದ ದುಷ್ಪರಿಣಾಮದ ಬಗ್ಗೆ. ಅಪ್ರಾಪ್ತ ಮಕ್ಕಳು ವಾಹನ ಚಲಾಯಿಸುವ ಕುರಿತು. ಆತ್ಮಹತ್ಯೆಯಂತ ಕೆಟ್ಟ ಯೋಚನೆಗಳನ್ನು ಮಾಡದಂತೆ. ತಂದೆ ತಾಯಿಯವರಿಗೆ ಕಲಿಸಿದ ಶಿಕ್ಷಕರಿಗೆ. ಕಲಿತ ಶಾಲೆಗೆ. ಊರಿಗೆ ಕೀರ್ತಿ ತಂದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುವಂತೆ
ಮಕ್ಕಳು ಮನ ಮುಟ್ಟುವಂತೆ. ನಲ್ಲೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಇಲ್ಲಿನ ಶಾಲಾ ಮಕ್ಕಳಿಗೆ ಮಕ್ಕಳ ಸ್ನೇಹಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಪೊಲೀಸ್ ಸಿಬ್ಬಂದಿ ಸಂತೋಷ್ ಕಾರ್ಕಳ ರ ವರು ಮಾಹಿತಿಯನ್ನು ನೀಡಿರುತ್ತಾರೆ.
ನಲ್ಲೂರು ಶಾಲಾ ಮುಖ್ಯ ಶಿಕ್ಷಕರಾದ ನಾಗೇಶ್ ರವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ಆಡಿ ಕಾರ್ಯಕ್ರಮವನ್ನು ನಿರೂಪಿಸಿದರು.
ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.






