
ನಲ್ಲೂರು ಗೋ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಶಿವಪ್ರಸಾದ್ ಎಂಬಾತ ಹಿಂದೂ ಸಂಘಟನೆ ಕಾರ್ಯಕರ್ತ ಆಗಿರುವುದಿಲ್ಲ ಮತ್ತು ಯಾವುದೇ ಪರಿವಾರ ಸಂಘಟನೆಯಲ್ಲಿಯೂ ಇದುವರೆಗೆ ಗುರುತಿಸಿಕೊಂಡಿಲ್ಲಎಂದು ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಪ್ರಸಾದ್ ನಿಟ್ಟೆ ತಿಳಿಸಿದ್ದಾರೆ
ಇದರ ಬಗ್ಗೆ ಸ್ಪಷ್ಟನೆ ನೀಡುವ ಅಗತ್ಯವೂ ಹಿಂದೂ ಸಂಘಟನೆಗಳಿಗೆ ಇಲ್ಲ ಎಂದಿರುವ ಅವರು,ಆದರೆ ಇದರ ಸತ್ಯಾಸತ್ಯತೆಯನ್ನು ತಿಳಿದಿದ್ದರೂ ಕೂಡ ಸುಳ್ಳು ಸುದ್ದಿ ಪ್ರಕಟಿಸುತ್ತಿರುವುದು ಸಮಾಜದಲ್ಲಿ ಗೊಂದಲಗಳಿಗೆ ಕಾರಣವಾಗುತ್ತದೆ.ಇದನ್ನು ಕಾರ್ಕಳ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ.
ಸಮಾಜದ ಉನ್ನತಿಗೆ ಎಲ್ಲರೂ ಸಹಕಾರ ನೀಡಬೇಕೆ ಹೊರತು ಸಮಾಜದ ಸ್ವಾಸ್ತ್ಯ ಕದಡುವ ಕೆಲಸ ಮಾಡಬಾರದು. ತಪ್ಪು ಸಂದೇಶ ಹಾಗೂ ಸುಳ್ಳು ಸುದ್ದಿ ಪ್ರಕಟಿಸುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡುತಿದ್ದೇವೆ ಎಂದು ಭಜರಂಗ ದಳ ತಾಲೂಕು ಸಂಯೋಜಕ ಮನೀಶ್ ನಿಟ್ಟೆ ತಿಳಿಸಿದ್ದಾರೆ





