
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದ ಮಹಿಳೆ ಸ್ವಾಭಿಮಾನದಿಂದ ಜೀವನ ಮಾಡಬೇಕು, ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಉದ್ದೇಶದಿಂದ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯ ಅಡಿ ಇದುವರೆಗೆ ಹಾಕಿದ 23 ಕಂತಿನಲ್ಲಿ ಒಬ್ಬೊಬ್ಬರ ಖಾತೆಯಲ್ಲಿ 26 ಸಾವಿರ ಜಮೆಯಾಗಿದೆ. ಈ ಮಾತಿಗೆ ನಾನು ಈಗಲೂ ಬದ್ಧಳಿದ್ದೇನೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಹಾಗೂ ನನ್ನ ಇಲಾಖೆಯು ರಾಜ್ಯದ ಮಹಿಳೆಯರಿಗೆ ನೀಡಿದ ವಚನವನ್ನು ಸಂಪೂರ್ಣ ಬದ್ಧತೆಯಿಂದ ಮಾಡಿದೆ. ಬಿಜೆಪಿಯವರು ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣದ ಬಗ್ಗೆ ಕೇಳಿದ್ದು ಪ್ರತಿ ತಿಂಗಳು ನನ್ನ ಇಲಾಖೆಯಿಂದ ಹಣಕಾಸು ಇಲಾಖೆಗೆ ಪತ್ರ ಕಳುಹಿಸುತ್ತೇನೆ. ಅಲ್ಲಿಂದ ಬಂದ ಕೂಡಲೇ ನಾನು ಫೈಲ್ ಮೂವ್ ಮಾಡುತ್ತೇನೆ. ಈ ಎರಡು ತಿಂಗಳು ಹಣ ಬಂದಿಲ್ಲ ಅಂದರೆ ಹಣಕಾಸು ಇಲಾಖೆ ಹೇಳಬೇಕು. ಬಿಜೆಪಿಯವರು 5,000 ಕೋಟಿ ಬಿಡುಗಡೆಯಾಗಿಲ್ಲ ಎಂದು ಹೇಳಿದ್ದಾರೆ. ಇದರ ಬಗ್ಗೆ ಹೆಚ್ಚಿಗೆ ಮಾತನಾಡಬೇಡಿ, ಎಷ್ಟು ಹಣಕಾಸು ಇಲಾಖೆಯಿಂದ ಬಿಡುಗಡೆಯಾಗಿದೆಯೋ ಅಷ್ಟು ಹಣ ಸಂದಾಯ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.





