500 ವಿದ್ಯಾರ್ಥಿ ಕಲಾವಿದರ ಅದ್ದೂರಿ ವೇದಿಕೆಗೆ ಸಾಕ್ಷಿಯಾಗಲಿದೆ “ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಕಳ ಘಟಕ”

ನವೆಂಬರ್ 29ರಂದು ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಕಾರ್ಕಳ ಇದರ ಆಶ್ರಯದಲ್ಲಿ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಕಾರ್ಕಳ ಸ್ವರಾಜ್ ಮೈದಾನದಲ್ಲಿ, ಸಂಜೆ 5:45 ರಿಂದ ವಿಜೃಂಭಣೆಯಿಂದ ನಡೆಯಲಿದೆ.
ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಕಳ ಘಟಕದ ಗೌರವಾಧ್ಯಕ್ಷರಾದ ಶಾಸಕ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ಕಾರ್ಯಕ್ರಮವನ್ನು ಉದ್ಯಮಿ ಬರೋಡಾ ಶಶಿಧರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಹಲವು ಗಣ್ಯರ ಉಪಸ್ಥಿತಿ ಇರಲಿದ್ದು, 45 ನಿಮಿಷಗಳ ಸಭಾ ಕಾರ್ಯಕ್ರಮ ನಡೆಯಲಿದೆ.
ನಂತರ 500 ವಿದ್ಯಾರ್ಥಿಗಳಿಂದ ಈ ಸಾಂಸ್ಕೃತಿಕ ವೈಭವ ನಡೆಯಲಿದ್ದು,
ಸಾಂಸ್ಕೃತಿಕ ಕಾರ್ಯಕ್ರಮಗಳು:
- ಯೋಗ ದೀಪಿಕ
- ಶಾಸ್ತ್ರೀಯ ನೃತ್ಯ- ಅಷ್ಟಲಕ್ಷ್ಮಿ.
- ಬಡಗುತಿಟ್ಟು ಯಕ್ಷಗಾನ-ಶಂಕರಾದ ಶರೀರಣಿ.
- ಗುಜರಾತಿನ ದಾಂಡಿಯಾ ನೃತ್ಯ.
- ಮಣಿಪುರಿ ಸ್ಟಿಕ್ ಡ್ಯಾನ್ಸ್.
- ಮಲ್ಲಕಂಬ ಹಾಗೂ ರೋಪ್ ಕಸರತ್ತು
- ಸೃಜನಾತ್ಮಕ ನೃತ್ಯ
- ಡೊಳ್ಳು ಕುಣಿತ
- ಕಥಕ್ ನೃತ್ಯ-ವರ್ಷಧಾರೆ
- ಪುರುಲಿಯಾ ಸಿಂಹ ನೃತ್ಯ
- ತೆಂಕುತಿಟ್ಟು ಯಕ್ಷಗಾನ- ಹಿರಣ್ಯಾಕ್ಷ ವಧೆ
- ಬೊಂಬೆ ವಿನೋದಾವಳಿ
ನಡೆಯಲಿದೆ.
ಕಾರ್ಯಕ್ರಮದಲ್ಲಿ ಆಕರ್ಷಕ ಬೊಂಬೆ ವಿನೋದವಳಿಗಳು, ಸಿಡಿಮದ್ದಿನ ಪ್ರದರ್ಶನ ಇರಲಿದ್ದು ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



















