
ಗದಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗಾರರ ಜೊತೆ ಮಾತನಾಡಿ “ಈ ದೇಶದಲ್ಲಿ ಆರ್ಎಸ್ ಸೇರಿದಂತೆ ಯಾರೇ ಸಂವಿಧಾನದ ವಿರುದ್ಧ ಹೋದರು ಅವರನ್ನು ಬ್ಯಾನ್ ಮಾಡುವುದು ಒಳ್ಳೆಯದು” ಎಂದು ಹೇಳಿದ್ದಾರೆ.
ಸಂವಿಧಾನ ರಕ್ಷಿಸಲು ಕಾಂಗ್ರೆಸ್ ಬದ್ಧವಾಗಿದ್ದು ಸಂವಿಧಾನಕ್ಕೆ ಧಕ್ಕೆ ಬಂದರೆ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಗ್ಯಾರೆಂಟಿ ಯೋಜನೆಯ ಕುರಿತು ಮಾತನಾಡಿದ ಅವರು “ನಮ್ಮ ಶಾಸಕರು ಯಾರೂ ಕೂಡ ಗ್ಯಾರಂಟಿ ಬಗ್ಗೆ ವಿರೋಧ ಮಾಡಿಲ್ಲ. ನಾವು ಹೇಳಿದ್ದೊಂದು ಮಾಧ್ಯಮದಲ್ಲಿ ಬರೆಯುವುದು ಒಂದು. ಯಾರು ಏನೇ ತಿಪ್ಪರಲಾಗ ಹಾಕಿದರು ಗ್ಯಾರಂಟಿ 5 ವರ್ಷ ಮುಂದುವರಿಯಲಿದೆ. ಅಷ್ಟು ಸುಲಭವಾಗಿ ಗ್ಯಾರಂಟಿ ನಿಲ್ಲಿಸಲು ಸಿಎಂ ಸಿದ್ದರಾಮಯ್ಯ ಬಿಡುವುದಿಲ್ಲ. ಚುನಾವಣೆ ಪೂರ್ವದಲ್ಲಿ ಗ್ಯಾರಂಟಿ ಪ್ರಣಾಳಿಕೆ ಯೋಜನೆಯ ಉಪಾಧ್ಯಕ್ಷನಾಗಿದ್ದೆ. ಈ ಬಗ್ಗೆ ನನಗೆ ಹೆಮ್ಮೆ ಇದೆ” ಎಂದು ಹೇಳಿದರು.