ಶ್ವಾಸಕೋಶ ಸಮಸ್ಯೆ ಇರೋರು ಈ ಕೂಡಲೇ ದೆಹಲಿ ಬಿಟ್ಟು ಹೋಗಿ : ಡಾ. ರಂದೀಪ್ ಗುಲೇರಿಯಾ

ನವದೆಹಲಿ: AIIMS ಮಾಜಿ ನಿರ್ದೇಶಕ ಮತ್ತು ಶ್ವಾಸಕೋಶ ಶಾಸ್ತ್ರಜ್ಞ ಡಾ. ರಂದೀಪ್ ಗುಲೇರಿಯಾ ದೆಹಲಿ ವಾಯುಗುಣ ಮಟ್ಟದ ಬಗ್ಗೆ ಮಾತನಾಡಿ ಪ್ರತಿ ವರ್ಷ ಚಳಿಗಾಲದಲ್ಲಿ ದೆಹಲಿಯಲ್ಲಿ ವಾಯುಗುಣಮಟ್ಟವು ಕಳಪೆ ಮಟ್ಟಕ್ಕೆ ಕುಸಿಯುತ್ತದೆ. ಆದ್ರೆ ಈ ಬಾರಿ ಉಸಿರಾಡುವ ಗಾಳಿ ವಿಷವಾಗಿ ಜನರ ಶ್ವಾಸಕೋಶ ಹೃದಯ ಹಾಗೂ ಮಿದುಳಿಗೆ ನಿರಂತರ ಹಾನಿಯುಂಟು ಮಾಡುತ್ತಿದೆ. ಹೀಗಾಗಿ ಶ್ವಾಸಕೋಶ ಸಮಸ್ಯೆ ಇರೋರು ಈ ಕೂಡಲೇ ದೆಹಲಿ ಬಿಟ್ಟು ಹೋಗಿ ಎಂದು ಎಚ್ಚರಿಕೆ ನೀಡಿದ್ದಾರೆ.
ದೆಹಲಿ ಗುಣಮಟ್ಟವು ಅತ್ಯಂತ ಅಪಾಯ ಮಟ್ಟಕ್ಕೆ ತಲುಪುತ್ತಿದೆ. ಶ್ವಾಸಕೋಶ ದುರ್ಬಲ ಇರೋರು ಸಾಧ್ಯವಾದ್ರೆ ಕೂಡಲೇ ನಗರವನ್ನು ಬಿಟ್ಟು ಹೋಗಿ. ಒಂದು ವೇಳೆ ಇದು ಸಾಧ್ಯವಾಗಗಿದ್ದರೇ ಮಾಸ್ಕ್ ಧರಿಸುವುದು, ಮನೆಯಲ್ಲಿದ್ದರೇ ಏರ್ ಫಿಲ್ಟರ್ ಬಳಸುವುದು ಅಥವಾ ವೈದ್ಯರು ನೀಡಿದ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ದೆಹಲಿಯ ವಾಯು ಮಾಲಿನ್ಯವು ಸೈಲೆಂಟಾಗಿ ಜನರನ್ನ ಕೊಲ್ಲುತ್ತಿದೆ, ಇದು ಕೋವಿಡ್-19 ಗಿಂತಲೂ ಹೆಚ್ಚು ಮಾರಕವಾಗಿದೆ ಎಂದು ಹೇಳಿದ್ದಾರೆ.






















































