ವಿಶೇಷ ಆಹ್ವಾನಿತರಾಗಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ “ವಂದನಾ ರೈ,ಕಾರ್ಕಳ”

ದುಬೈ : ದಿನಾಂಕ 16/11/2025 ರಂದು ಶಾರ್ಜಾದ ವುಮೇನ್ಸ್ ಯುನಿಯನ್ ಅಸೋಸಿಯೇಶನ್ ನ ಸಭಾಂಗಣದಲ್ಲಿ ಸಂಜೆ 3.30 ರಿಂದ ಶಾರ್ಜಾ ಕರ್ನಾಟಕ ಸಂಘದ 23 ನೇ ವರ್ಷದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮ ಜರುಗಲಿದ್ದು, ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕಿ ಶ್ರೀಮತಿ ವಂದನಾ ರೈ ಕಾರ್ಕಳ ಇವರು ಆಗಮಿಸಲಿದ್ದಾರೆ.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಸಮಾಜ ಸೇವಕರಾದ ರೊನಾಲ್ಡ್ ಮಾರ್ಟಿಸ್ ರವರಿಗೆ ಮಯೂರ ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ, ರಂಗಭೂಮಿ ಕ್ಷೇತ್ರದ ಸಾಧನೆಗಾಗಿ ವಾಸು ಶೆಟ್ಟಿ ಮತ್ತು ಸಮಾಜಸೇವೆಯನ್ನು ಗುರುತಿಸಿ ಅಬ್ದುಲ್ ಲತೀಫ್ ಮೂಲ್ಕಿಯವರಿಗೆ ಸಾಧಕ ಪ್ರಶಸ್ತಿ ಹಾಗೂ ಸಂಸ್ಥೆಗೆ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಸಂಸ್ಥೆಯ ಪದಾಧಿಕಾರಿಯಾದ ಸಯ್ಯದ್ ಅಜ್ಮಲ್ ರವರನ್ನು ಸನ್ಮಾನಿಸಲಾಗುವುದು.


ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಅನಿವಾಸಿ ಕನ್ನಡಿಗರ ಮಕ್ಕಳಿಂದ “ಚಿಣ್ಣರ ಚಿಲಿಪಿಲಿ” ಛದ್ಮವೇಷ ಸ್ಪರ್ಧೆ ಮತ್ತು “ಬಾನ ದಾರಿಯಲ್ಲಿ” ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಲಿದೆ.







