
ದಸರಾ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಇದೀಗ ಎಲ್ ಪಿ ಜಿ ಇದರ ಏರಿಕೆ ಬಿಸಿ ಮುಟ್ಟಿದೆ. 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ದರಗಳು ಹೋಟೆಲ್ ಉದ್ಯಮದ ಮೇಲೆ ನೇರ ಪರಿಣಾಮ ಬೀರಲಿದೆ.
ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 15 ರೂ.ಗಳವರೆಗೆ ಹೆಚ್ಚಳವಾಗಿದೆ. ಗೃಹ ಬಳಕೆಯ 14 ಕೆಜಿಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಇದೀಗ ಎಲ್‌ಪಿಜಿ ದರ ಹೆಚ್ಚಾದ ಹಿನ್ನೆಲೆ ದೆಹಲಿಯಲ್ಲಿ 1595.50 ರೂಪಾಯಿ, ಕೋಲ್ಕತ್ತಾದಲ್ಲಿ 1700 ರೂಪಾಯಿ, ಮುಂಬೈನಲ್ಲಿ 1547 ರೂಪಾಯಿ, ಚೆನ್ನೈನಲ್ಲಿ 1754 ರೂಪಾಯಿ ಆಗಿದೆ.
14 ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆ 855.50 ರೂಪಾಯಿ ಆಗಿದೆ. 19 ಕೆಜಿ ಸಿಲಿಂಡರ್ ಬೆಲೆ 1,699 ರೂಪಾಯಿಯಾಗಿದ್ದು ಬೆಂಗಳೂರಿನಲ್ಲಿಯೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 51 ರೂಪಾಯಿ ಏರಿಕೆಯಾಗಿದೆ.
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ವಿತರಕರ ಸೇವೆಯಿಂದ ಬೇಸತ್ತಿದ್ದಲ್ಲಿ, ಗ್ರಾಹಕರು ಇನ್ನು ಮೊಬೈಲ್ ಕಂಪನಿಯಂತೆ ತಮ್ಮಿಷ್ಟದ ಕಂಪನಿಗಳಿಂದ ಸೇವೆ ಪಡೆಯುವ ವ್ಯವಸ್ಥೆ ಶೀಘ್ರವಾಗಿ ಜಾರಿಗೆ ಬರುವ ನಿರೀಕ್ಷೆಯಿದೆ.



















