ಕಾರ್ಕಳ ತಾಲೂಕು ನಾಗರಿಕ ಜನಜಾಗೃತಿ ಸಮಿತಿ ಅಧ್ಯಕ್ಷ ಉಮೇಶ್ ಕಲ್ಲೊಟ್ಟೆ ಹೇಳಿಕೆ

ಕಾರ್ಕಳ:ಯಾರದ್ದೋ ಕುಮ್ಮಕ್ಕಿನಿಂದ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಅಕ್ರಮ ಮಾಡಿದವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲು ಮಾಡಿದ ಕಾರಣಕ್ಕೆ ಕಾರ್ಕಳದ ಪೊಲೀಸರನ್ನು ಗುರಿಯಾಗಿಸಿಕೊಂಡು ಕಾರ್ಕಳದ ದಕ್ಷ ಪೊಲೀಸ್ ಅಧಿಕಾರಿಯಾದ ಮಾನ್ಯ ಅರವಿಂದ ಕಲ್ಲಗುಜ್ಜಿ ಯವರ ಪ್ರತಿಭಟನೆ ಮಾಡುತ್ತಿರುವ ಕಾರ್ಕಳದ ಶುಬೋಧ ರವರ ವರ್ತನೆ ಖಂಡನೀಯ ಎಂದು ತಾಲೂಕು ನಾಗರಿಕ ಜನಜಾಗೃತಿ ಸಮಿತಿ ಅಧ್ಯಕ್ಷ ಉಮೇಶ್ ಕಲ್ಲೊಟ್ಟೆ ಆರೋಪಿಸಿದ್ದಾರೆ, ಹಿಂದೆ ಕಾರ್ಕಳದ ಪ್ರತಿಷ್ಠಿತ ಶಾಲೆಯ ಅವ್ಯವಹಾರದ ಆದ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ ನಂತರ ಸುಮ್ಮನಾದ ಬಗ್ಗೆ ನಾನು ಪೊಲೀಸರಿಗೆ ಶುಬೋಧ್ ರಾವರವರು ದಾಖಲೆಯನ್ನು ಇಟ್ಟುಕೊಂಡ ಕಾರಣಕ್ಕೆ ಅವರ ವಿರುದ್ಧ ಈ ಹಿಂದೆ ನಾನು ನೀಡಿದ ದೂರಿನ ಆಧಾರದ ಮೇಲೆ ದಿನಾಂಕ-30-09-2023 ರಂದು ಕಾರ್ಕಳದ ಪೊಲೀಸರಿಗೆ ಹೇಳಿಕೆಯನ್ನು ನೀಡಿದ್ದಾರೆ ವಿನಃ ಇವತ್ತಿನ ವರೆಗೆ ಅಕ್ರಮದ ವಿರುದ್ಧ ಯಾವುದೇ ಸೂಕ್ತ ಪ್ರಾಧಿಕಾರಕ್ಕೆ ದೂರನ್ನು ನೀಡಿರುವುದಿಲ್ಲ ಆದರೆ ಈಗ ಏಕಾಏಕಿ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಿದ ಕಾರಣಕ್ಕೆ ಕಾರ್ಕಳದ ಪೊಲೀಸರನ್ನು ಗುರಿಯಾಗಿಸಿಕೊಂಡು ಕಾರ್ಕಳದ ದಕ್ಷ ಪೊಲೀಸ್ ಅಧಿಕಾರಿಯಾದ ಮಾನ್ಯ ಅರವಿಂದ ಕಲ್ಲಗುಜ್ಜಿ ಯವರ ಪ್ರತಿಭಟನೆ ಮಾಡಿ ಪೋಲೀಸರ ಮನೋಸ್ಥ್ಯೆರ್ಯ ಕುಗ್ಗಿಸುವ ಕೆಲಸ ಮಾಡಿದರೆ ಖಂಡಿತವಾಗಿ ಕಾರ್ಕಳದ ಶುಬೋಧ ರವರ ವಿರುದ್ಧ ಪ್ರತಿಭಟನೆ ಹಾಗೂ ಕಾರ್ಕಳ ಪುರಸಭೆ ಮುಂದೆ ಹೋರಾಟ ಮಾಡಬೇಕಾಗಬಹುದು ಹಾಗೂ ಹೇಳಿಕೆಯ ದಾಖಲೆಗಳನ್ನು ಬಿಡುಗಡೆ ಮಾಡಬೇಕಾಗಬಹುದು ಎಂದು ಕಾರ್ಕಳ ತಾಲೂಕು ನಾಗರಿಕ ಜನಜಾಗೃತಿ ಸಮಿತಿ ಅಧ್ಯಕ್ಷರಾದ ಉಮೇಶ್ ಕಲ್ಲೊಟ್ಟೆಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ





