28.5 C
Udupi
Tuesday, April 21, 2026
spot_img
spot_img
HomeBlogತೆರಿಗೆ ಬದಲಾವಣೆಯ ಕುರಿತ ವಿಶೇಷ ಕಾರ್ಯಗಾರ

ತೆರಿಗೆ ಬದಲಾವಣೆಯ ಕುರಿತ ವಿಶೇಷ ಕಾರ್ಯಗಾರ

ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ತೆರಿಗೆ ಬದಲಾವಣೆ ಮತ್ತು ಇತರ ನೀತಿಯ ಬದಲಾವಣೆಗಳನ್ನು ತಿಳಿಸುವ “BUZZ @ CREATIVE ” ವಿಶೇಷ ಕಾರ್ಯಗಾರವನ್ನು 10 ಆಗಸ್ಟ್ 2024ರಂದು ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಯಿತು.


ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ CA ನಿತೇಶ್ ಶೆಟ್ಟಿ ರವರು ಬಜೆಟ್ ನ ಕುರಿತು, CA ಚರಣ್ ರಾಜ್ ಮುಚ್ಚೂರು ರವರು ನೇರ ತೆರಿಗೆಯ ಕುರಿತು, CA ಸುಮಂತ್ ಬಂಗೇರ ರವರು ಪರೋಕ್ಷ ತೆರಿಗೆಯ ಕುರಿತು ಸಮಗ್ರ ಮಾಹಿತಿಗಳನ್ನು ನೀಡಿದರು. ಕಾಲೇಜಿನ ಸಹ ಸಂಸ್ಥಾಪಕರಾದ ಅಮೃತ್ ರೈ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾರ್ಯಕ್ರಮದಲ್ಲಿ ಕಾರ್ಕಳದ ಸ್ಥಳೀಯ ಸಣ್ಣ ಮತ್ತು ದೊಡ್ಡ ವ್ಯಾಪಾರಸ್ಥರು, ಉದ್ಯಮದಾರರು ಪಾಲ್ಗೊಂಡು ಮಾಹಿತಿಗಳನ್ನು ಪಡೆದುಕೊಂಡರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಇನ್ನೋರ್ವ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ ಬಿ, ಉಪನ್ಯಾಸಕ ವರ್ಗದವರು, ವಸತಿ ನಿಲಯ ಪಾಲಕರು, ಬೋಧಕೇತರ ಸಿಬ್ಬಂದಿಗಳು, ವಾಣಿಜ್ಯ ವಿಭಾಗದ ವಿದ್ಯಾರ್ಥಿವಿದ್ಯಾರ್ಥಿನಿಯರು, ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಕಾರ್ಯಗಾರದ ವಿಷಯದ ಕುರಿತು ಸಂವಾದ ಕಾರ್ಯಕ್ರಮವು ನಡೆಯಿತು. ಅರ್ಥಶಾಸ್ತ್ರ ಉಪನ್ಯಾಸಕ ಉಮೇಶ್ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page