
ಬೆಂಗಳೂರು: ಕೇಂದ್ರ ಸರ್ಕಾರವು ಹಿಂದೂ ಧರ್ಮದ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ತಿರುಪತಿಗೆ ಹೋಗುವ ಭಕ್ತರಿಗೆ ಸಿಹಿ ಸುದ್ದಿ ನೀಡಿದ್ದು ಅದೇನೆಂದರೆ ಕರ್ನಾಟಕದಿಂದ ತಿರುಪತಿಗೆ ನೂತನ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಿದೆ. ಪ್ರಯಾಣಿಕರ ಅನುಕೂಲವಾಗಲೆಂದು ಚಿಕ್ಕಮಗಳೂರಿನಿಂದ ತಿರುಪತಿಗೆ ನೂತನ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು ಈ ಬಗ್ಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಮಲೆನಾಡು, ತುಮಕೂರು, ಬೆಂಗಳೂರು ಹಾಗೂ ಕೋಲಾರ ಭಾಗದ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಚಿಕ್ಕಮಗಳೂರಿನಿಂದ ತಿರುಪತಿಗೆ ನೂತನ ವಾರದ ರೈಲಿನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು ಪ್ರತಿ ಗುರುವಾರ ತಿರುಪತಿಯಿಂದ ಹಾಗೂ ಪ್ರತಿ ಶುಕ್ರವಾರ ಚಿಕ್ಕಮಗಳೂರಿನಿಂದ ಈ ರೈಲು ಹೊರಡಲಿದೆ. ಈ ಭಾಗದ ಜನತೆ ಈ ರೈಲಿನ ಸೌಲಭ್ಯ ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಸಚಿವರು ಪೋಸ್ಟ್ ಮಾಡಿದ್ದಾರೆ.
ತಿರುಪತಿ -ಚಿಕ್ಕಮಗಳೂರು (ರೈಲು ಸಂಖ್ಯೆ 17423):
ಈ ರೈಲು ಪ್ರತಿ ಗುರುವಾರ ರಾತ್ರಿ 09 ಗಂಟೆಗೆ ತಿರುಪತಿಯಿಂದ ಹೊರಡಲಿದ್ದು, ಮರುದಿನ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಚಿಕ್ಕಮಗಳೂರು ತಲುಪಲಿದೆ.
ಚಿಕ್ಕಮಗಳೂರು-ತಿರುಪತಿ (ರೈಲು ಸಂಖ್ಯೆ 17424):
ಈ ರೈಲು ಪ್ರತಿ ಶುಕ್ರವಾರ ಸಂಜೆ 05:30 ಚಿಕ್ಕಮಗಳೂರಿನಿಂದ ಹೊರಡಲಿದ್ದು, ಶನಿವಾರ ಬೆಳಿಗ್ಗೆ 07:40ಕ್ಕೆ ತಿರುಪತಿ ತಲುಪಲಿದೆ.
ನಿಲ್ದಾಣಗಳು:
ಚಿತ್ತೂರು, ಕಟ್ಟಾಡಿ, ಕುಪ್ಪಂ, ಬಂಗಾರಪೇಟೆ, ವೈಟ್‌ಫೀಲ್ಡ್, ಕೆ ಆರ್ ಪುರಂ, ಎಸ್‌ಎಂವಿಬಿ ಬೆಂಗಳೂರು, ಚಿಕ್ಕ ಬಾಣಾವರ, ತುಮಕೂರು, ತಿಪಟೂರು, ಅರಸೀಕೆರೆ, ದೇವನೂರು, ಬಿರೂರು, ಕಡೂರು, ಬಿಸಲೇಹಳ್ಳಿ, ಸಕರಾಯಪಟ್ಟಣ.









