ಚಿನ್ನಯ್ಯನ ಫೋನ್ ಬಟ್ಟೆಬರೆ ವಶಕ್ಕೆ…!

ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ವಿಚಾರವಾಗಿ ಇಂದು ಮಹೇಶ್ ಶೆಟ್ಟಿ ತಿಮರೋಡಿ ನಿವಾಸದ ಮೇಲೆ ಎಸ್ಐಟಿ ದಾಳಿ ನಡೆಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ತಿಮರೋಡಿಯವರ ನಿವಾಸಕ್ಕೆ ತೆರಳಿದ್ದು, ಅಲ್ಲಿ ನನ್ನ ಬಟ್ಟೆ ಇಟ್ಟಿದ್ದೇನೆ. ಮೊಬೈಲ್ ಕೂಡ ತಿಮರೋಡಿ ಕಡೆಯವರ ಜೊತೆ ಇತ್ತು ಎಂದು ಚಿನ್ನಯ್ಯ ತಿಳಿಸಿದ್ದು, ಈ ವಿಚಾರವಾಗಿ ಇಂದು ಚಿನ್ನಯ್ಯ ತಂಗಿದ್ದ ಕೊಠಡಿಯ ಮಹಜರು ಮತ್ತು ಮೊಬೈಲ್ ಸಂಗ್ರಹಿಸಲು ಪೊಲೀಸರು ತಿಮರೋಡಿ ನಿವಾಸಕ್ಕೆ ತೆರಳಿದ್ದಾರೆ.
ಆರಂಭದಲ್ಲಿ ಚಿನ್ನಯ್ಯ ತಿಮರೋಡಿ ಸಹೋದರ ಮೋಹನ್ ಶೆಟ್ಟಿ ಅವರ ಮನೆಯಲ್ಲಿದ್ದ ಹಿನ್ನೆಲೆ, ಮೊದಲು ಆ ಮನೆಯಲ್ಲಿ ಮಹಜರು ಕಾರ್ಯ ನಡೆಸಿ, ಇದೀಗ ತಿಮರೋಡಿ ಮನೆಯಲ್ಲಿ ಮಹಜರು ಕಾರ್ಯ ನಡೆಸಲಾಗಿದೆ ಎನ್ನಲಾಗುತ್ತಿದ್ದು, ಸಂದರ್ಭದಲ್ಲಿ ಚಿನ್ನಯ್ಯನ ಮೊಬೈಲ್ ಮತ್ತು ಬಟ್ಟೆಬರೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.