26.5 C
Udupi
Tuesday, February 3, 2026
spot_img
spot_img
HomeBlogತನ್ನ ಪತಿಯನ್ನು ಕೊಲ್ಲಲು ಪ್ಲಾನ್ ಬಿ ಅನ್ನು ಸಹ ಸಿದ್ಧಪಡಿಸಿದ್ದ ಕುತಂತ್ರಿ ಸೋನಮ್ ರಘುವಂಶಿ: ವಿಚಾರಣೆ...

ತನ್ನ ಪತಿಯನ್ನು ಕೊಲ್ಲಲು ಪ್ಲಾನ್ ಬಿ ಅನ್ನು ಸಹ ಸಿದ್ಧಪಡಿಸಿದ್ದ ಕುತಂತ್ರಿ ಸೋನಮ್ ರಘುವಂಶಿ: ವಿಚಾರಣೆ ವೇಳೆ ಬಯಲಾದ ಆಘಾತಕಾರಿ ವಿಚಾರ…!

ಇಂದೋರ್ : ಸೋನಮ್ ರಘುವಂಶಿ ತನ್ನ ಪತಿ ರಾಜಾ ರಘುವಂಶಿಯನ್ನು ಹನಿಮೂನ್ ನೆಪದಲ್ಲಿ ಕರೆದೊಯ್ದು ಪ್ರಿಯಕರನಿಂದ ಕೊಲೆ ಮಾಡಿಸಿದ್ದು ಈ ಪ್ರಕರಣದ ನಾಲ್ವರು ಆರೋಪಿಗಳು ವಿಚಾರಣೆಯ ಸಮಯದಲ್ಲಿ ಅನೇಕ ಆಘಾತಕಾರಿ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಈ ವಿಚಾರಣೆ ವೇಳೆ ಕುತಂತ್ರಿ ಸೋನಮ್ ರಘುವಂಶಿ ತನ್ನ ಪತಿಯನ್ನು ಕೊಲ್ಲಲು ಪ್ಲಾನ್ ಬಿ ಅನ್ನು ಸಹ ಸಿದ್ಧಪಡಿಸಿದ್ದಳು. ಆರೋಪಿಗಳು ಅವನನ್ನು ಕೊಲ್ಲಲು ಸಾಧ್ಯವಾಗದಿದ್ದರೆ, ಸೋನಮ್ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ರಾಜ್‌ನನ್ನು ಕಂದಕಕ್ಕೆ ತಳ್ಳಿ ಕೊಲ್ಲಲು ಬಯಸಿದ್ದಳು ಎನ್ನುವ ಆಘಾತಕಾರಿ ವಿಚಾರ ಬಯಲಾಗಿದೆ.

ರಾಜಾ ರಘುವಂಶಿ ಕೊಲೆ ಪ್ರಕರಣದ ಆರೋಪಿಗಳು ವಿಚಾರಣೆ ವೇಳೆ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದು ರಾಜಾನನ್ನು ಕೊಂದ ನಂತರ, ದೇಹವನ್ನು ಶಿಲ್ಲಾಂಗ್‌ನಲ್ಲಿರುವ ಕಂದಕಕ್ಕೆ ಎಸೆದಿದ್ದಾರೆ ಎಂದು ಹೇಳಿದ್ದಾರೆ.

ಆರೋಪಿಗಳನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದು ರಾಜಾ ಅವರ ಪತ್ನಿ ಸೋನಮ್ ರಘುವಂಶಿ ಈ ಇಡೀ ಪ್ರಕರಣದ ಸೂತ್ರಧಾರಿ ಎಂದು ಹೇಳಲಾಗುತ್ತಿದೆ. ಕೊಲೆಯ ಮಾಸ್ಟರ್ ಮೈಂಡ್ ರಾಜ್ ಕುಶ್ವಾಹ. ಮದುವೆಗೆ ಮುಂಚೆಯೇ ರಾಜಾ ರಘುವಂಶಿಯ ಕೊಲೆಗೆ ಸಿದ್ಧತೆಗಳು ನಡೆಯುತ್ತಿದ್ದವು. ರಾಜಾ ಮತ್ತು ಸೋನಂ ತಮ್ಮ ಹನಿಮೂನ್‌ಗೆ ಹೊರಡುವ ಮೊದಲೇ ಎಲ್ಲರೂ ಶಿಲ್ಲಾಂಗ್‌ಗೆ ತೆರಳಿದ್ದರು.

ರಾಜ ರಘುವಂಶಿ ಮೇಲೆ ವಿಶಾಲ್ ಮೊದಲು ದಾಳಿ ಮಾಡಿದ್ದ. ವಿಶಾಲ್ ಮನೆಯಿಂದ ವಶಪಡಿಸಿಕೊಂಡ ಬಟ್ಟೆಗಳ ಮೇಲೆ ರಕ್ತದ ಕಲೆಗಳು ಕಂಡುಬಂದಿವೆ. ಈಗ ವಿಧಿವಿಜ್ಞಾನ ತನಿಖೆಯಿಂದ ಅದು ಯಾರ ರಕ್ತ ಎಂದು ತಿಳಿದುಬರಲಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page