23.1 C
Udupi
Monday, February 2, 2026
spot_img
spot_img
HomeBlogತತ್ಕಾಲ್ ಟಿಕೆಟ್ ಬುಕಿಂಗ್ ಗೆ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡಿ ಆದೇಶಿಸಿದ ರೈಲ್ವೆ ಸಚಿವಾಲಯ

ತತ್ಕಾಲ್ ಟಿಕೆಟ್ ಬುಕಿಂಗ್ ಗೆ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡಿ ಆದೇಶಿಸಿದ ರೈಲ್ವೆ ಸಚಿವಾಲಯ

ನವದೆಹಲಿ: ಭಾರತೀಯ ರೈಲ್ವೆ ಸಚಿವಾಲಯವು ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಯದಲ್ಲಿ ಮಹತ್ತರ ಬದಲಾವಣೆಯನ್ನು ಮಾಡಿದ್ದು ಅದೇನೆಂದರೆ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಬೇಕೆಂದರೆ IRCTC ಅಧಿಕೃತ ವೆಬ್ಸೈಟ್ ಅಥವಾ ಆ್ಯಪ್ ಗೆ ಆಧಾರ್ ಲಿಂಕ್ ಆಗಿರುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಹೀಗಾಗಿ ಇನ್ಮುಂದೆ ಆಧಾರ್ ಲಿಂಕ್ ಹೊಂದಿರುವ ಬಳಕೆದಾರರು ಮಾತ್ರ ತತ್ಕಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಏಜೆಂಟ್ ಗಳ ಮೇಲೆ ಸಮಯದ ನಿರ್ಬಂಧ ಹೇರಿದ್ದು ಈ ಹೊಸ ನಿಯಮ ಜುಲೈ 1ರಿಂದ ಈ ಜಾರಿಗೆ ಬರಲಿದೆ ಎಂದು ರೈಲ್ವೆ ಸಚಿವಾಲಯ ಸೂಚನೆ ನೀಡಿದೆ.

ಜುಲೈ 15 ರಿಂದ ತತ್ಕಾಲ್ ಬುಕಿಂಗ್‌ಗಳಿಗೆ ಆಧಾರ್ ಆಧಾರಿತ OTP ದೃಢೀಕರಣ ಕಡ್ಡಾಯಗೊಳಿಸಲಾಗುತ್ತದೆ. ಕಂಪ್ಯೂಟರ್ ಆಧಾರಿತ OTP ಯ ದೃಢೀಕರಣದ ನಂತರವೇ ಭಾರತೀಯ ರೈಲ್ವೆ ಅಥವಾ ಅಧಿಕೃತ ಏಜೆಂಟ್‌ಗಳ ಮೂಲಕ ಬುಕಿಂಗ್ ಮಾಡಲು ತತ್ಕಾಲ್ ಟಿಕೆಟ್‌ಗಳು ಲಭ್ಯವಿರುತ್ತವೆ. ಇದನ್ನು ಬಳಕೆದಾರರು ಬುಕಿಂಗ್ ಸಮಯದಲ್ಲಿ ಒದಗಿಸಿದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇನ್ನು ಭಾರತೀಯ ರೈಲ್ವೆಯ ಅಧಿಕೃತ ಏಜೆಂಟ್ಗಳಿಗೆ ತತ್ಕಾಲ್ ಟಿಕೆಟ್ ಆರಂಭವಾಗುವ ಮೊದಲ 30 ನಿಮಿಷದಲ್ಲಿ ಬುಕಿಂಗ್ ಮಾಡುವ ಅವಕಾಶವನ್ನು ನಿರ್ಬಂಧಿಸಿದೆ. ಅಂದರೆ ಬೆಳಗ್ಗೆ 10 ರಿಂದ 10.30 ರವರೆಗೆ ಎಸಿ, ಬೆಳಗ್ಗೆ 11 ರಿಂದ 11.30 ರವರೆಗೆ ಆರಂಭವಾಗುವ ನಾನ್ ಎಸಿ ಟಿಕೆಟ್ ಗಳನ್ನು ಬುಕ್ ಮಾಡುವುದಕ್ಕೆ ಏಜೆಂಟ್ಗಳಿಗೆ ಅವಕಾಶ ನೀಡಿಲ್ಲ. ವ್ಯವಸ್ಥೆಯಲ್ಲಿ ಆದ ಮಾರ್ಪಾಡು ಮತ್ತು ಬದಲಾವಣೆಗಳನ್ನು ಎಲ್ಲಾ ವಲಯ ರೈಲ್ವೆಗಳಿಗೆ ತಿಳಿಸಲು ಸಚಿವಾಲಯವು ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ (CRIS) ಮತ್ತು IRCTC ಗೆ ನಿರ್ದೇಶಿಸಿದೆ. ಜೊತೆಗೆ, ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಮಾಡಲಾಗುವುದು ಎಂದು ತಿಳಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page