
ಬೆಂಗಳೂರು: ರಾಜ್ಯ ಸರ್ಕಾರವು ಡೀಸೆಲ್, ಹಾಲು, ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಮದ್ಯದ ದರ ಏರಿಕೆಗೆ ಮುಂದಾಗಿದ್ದು ಮಧ್ಯಪ್ರಿಯರಿಗೆ ಶಾಕ್ ನೀಡಿದೆ.
ಸರ್ಕಾರವು ಬಿಯರ್ ಮೇಲಿನ ಅಬಕಾರಿ ಸುಂಕವನ್ನ 195% ನಿಂದ 205% ಹೆಚ್ಚಿಸುವ ಬಗ್ಗೆ ಕರಡು ಅಧಿಸೂಚನೆ ಪ್ರಕಟಿಸಿದ್ದು ಇದಕ್ಕೆ ವಾರದೊಳಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಒದಗಿಸಲಾಗಿದೆ.
ಬ್ರಾಂಡಿ, ವಿಸ್ಕಿ, ರಮ್, ಜಿನ್ಗಳ ದರವನ್ನ ಪ್ರತಿ ಕ್ವಾಟರ್ಗೆ 10 ರೂ.ನಿಂದ 15 ರೂ. ವರೆಗೆ ಹೆಚ್ಚಿಸಲು ನಿರ್ಧರಿಸಲಾಗಿದ್ದು ಅಲ್ಲದೇ ಬಿಯರ್ ದರವನ್ನ 10 ರೂ. ನಿಂದ 20 ರೂ. ವರೆಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇನ್ನೂ ಹೈ ಎಂಡ್ ಅಥವಾ ಪ್ರೀಮಿಯಂ ಮದ್ಯಗಳ ದರಗಳಲ್ಲಿ ಏರಿಕೆ ಇರುವುದಿಲ್ಲ ಎಂದು ವರದಿಯಾಗಿದೆ.





