
ತುಮಕೂರು: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಶ್ರೀ ಗುರು ಗಿರಿ ಸಿದ್ದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ದೈವ, ಡಿ.ಕೆ.ಶಿವಕುಮಾರ್ ಅದಷ್ಟು ಬೇಗ ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದಿದೆ.
ಈಗಾಗಲೇ ಭವಿಷ್ಯ ನುಡಿದು ಆಗಿದೆ. ಕೆಲವು ವಿಚಾರ ಈಗಾಗಲೇ ಅವರಿಗೆ ತಿಳಿಸಿದೆ. ಅದರಂತೆ ನಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಅದಷ್ಟು ಬೇಗ ಸಿಎಂ ಸ್ಥಾನಕ್ಕೆ ಡಿಕೆಶಿ ಏರಲಿದ್ದಾರೆ ಎಂದು ಉತ್ತರಿಸಿದೆ. ದೈವದ ನುಡಿ ಕೇಳಿ ಸದ್ಯ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.







