
ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷದ್ ಕೇಂದ್ರ ಸಮಿತಿ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಘಟಕದ ವತಿಯಿಂದ ದಿನಾಂಕ 18. 4. 2025 ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ, ಪ್ರದೀಪ್ ಕುಮಾರ್ ಕಲ್ಕೂರ ಗೌರವಾಧ್ಯಕ್ಷರು,ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ.ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು. ಮಾಜಿ ರಾಜ್ಯಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು.ಶ್ರೀ ಭುವನಾಭಿರಾಮ ಉಡುಪ, ಸಂಪಾದಕರು ಯುಗಪುರುಷ ಮಾಸ ಪತ್ರಿಕೆ ಕಿನ್ನಿಗೋಳಿ.ಶ್ರೀಪತಿ ಭಟ್ ಮೂಡುಬಿದಿರೆ. ಸಾಹಿತ್ಯ ಪೋಷಕರು ಹಾಗೂ ಸಾಮಾಜಿಕ ಮುಂದಾಳು.ಇವರೆಲ್ಲರ ಸಮ್ಮುಖದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಘಟಕದ ಪದಗ್ರಹಣ ಸಮಾರಂಭದಲ್ಲಿ ಡಾ. ಸುಮತಿ ಪಿ. ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.




