
ಮುಖಪುಟ (ಫೇಸ್ ಬುಕ್)ದ ಹೆಸರಾಂತ ಸಾಹಿತ್ಯ ಬಳಗವಾದ ಯುಗಾದಿ ಬಳಗದಿಂದ ದಿನಾಂಕ 20.10.2024 ಆದಿತ್ಯವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸಭಾಂಗಣದಲ್ಲಿ ,ಶ್ರೀಮತಿ ಶ್ಯಾಮಲಾ ಗೋಪಿನಾಥ್ ಕಾರ್ಕಳ ಇವರ ಅಧ್ಯಕ್ಷತೆಯಲ್ಲಿ ನಡೆದ “ಯುಗಾದಿ ಸ್ನೇಹಪರ್ವ” ಕಾರ್ಯಕ್ರಮದಲ್ಲಿ ಡಾ.ಸುಮತಿ ಪಿ ಯವರನ್ನು ಯುಗಾದಿ ಬಳಗದಲ್ಲಿ ಅವರ ಕ್ರಿಯಾಶೀಲ ಸಾಹಿತ್ಯ ಸೇವೆಯನ್ನು ಗುರುತಿಸಿ”ಯುಗಾದಿ ಐಸಿರಿ” ಗೌರವವನ್ನು ನೀಡಿ, ಸನ್ಮಾನಿಸಿ ಅಭಿನಂದಿಸಲಾಯಿತು.






















































