ಎತ್ತರ ಜಿಗಿತದಲ್ಲಿ ರಶ್ಮಿತಾ ದೇವಾಡಿಗ ರಾಜ್ಯ ಮಟ್ಟದಲ್ಲಿ ಸಾಧನೆ

ಆಗಸ್ಟ್ 3,4 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಕಿಡ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ , ಎನ್.ಎಸ್.ಎ.ಎಮ್ ಕನ್ನಡ ಮಾಧ್ಯಮ ಪ್ರೌಢಶಾಲೆ 9ನೇ ತರಗತಿಯ ರಶ್ಮಿತಾ ದೇವಾಡಿಗ ಎತ್ತರ ಜಿಗಿತದಲ್ಲಿ 1.45 ಮೀ .ಎತ್ತರ ಜಿಗಿದು ಬೆಳ್ಳಿ ಪದಕ ಪಡೆದುಕೊಂಡಿದ್ದಾಳೆ.
ಇವರು ಶ್ರೀ ಗಣೇಶ್ ಕುಮಾರ್ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಕ್ರೀಡಾ ತರಬೇತುದಾರರು ಇವರಿಂದ ಕೋಚಿಂಗ್ ಪಡೆಯುತ್ತಿದ್ದು, ಉಷಾ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕಿ ಇವರ ವಿದ್ಯಾರ್ಥಿನಿಯಾಗಿದ್ದಾಳೆ.























































































