
ಹೋಸದಲ್ಲಿ, ಮಾ. 31: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಬೂತ್ಗಳಲ್ಲಿ ನಗದು ಪಾವತಿಗೆ ತೆರೆ ಬೀಳಲಿದ್ದು, ಏಪ್ರಿಲ್ 1ರಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಂಪೂರ್ಣ ಡಿಜಿಟಲ್ ಟೋಲ್ ಸಂಗ್ರಹಣೆಗೆ ಮುಂದಾಗಿದೆ.
ಇನ್ನು ಮುಂದೆ ಫಾಸ್ಟ್ಯಾಗ್ ಅಥವಾ ಯುಪಿಐ ಮೂಲಕವೇ ಶುಲ್ಕ ಪಾವತಿ ಕಡ್ಡಾಯವಾಗಲಿದೆ. ಈ ಕ್ರಮದಿಂದ ಪಾರದರ್ಶಕತೆ ಹೆಚ್ಚಿಸುವುದು ಹಾಗೂ ಸಂಚಾರ ದಟ್ಟತೆಯನ್ನು ಕಡಿಮೆ ಮಾಡುವುದು ಉದ್ದೇಶವಾಗಿದೆ.
ಡಿಜಿಟಲ್ ವ್ಯವಸ್ಥೆಯಿಂದ ಕಾಯುವ ಸಮಯ ಮತ್ತು ಇಂಧನ ಬಳಕೆ ಕಡಿಮೆಯಾಗುವ ಸಾಧ್ಯತೆ ಇದ್ದರೂ, ಟೋಲ್ ಬೂತ್ ಉದ್ಯೋಗಗಳ ಮೇಲೆ ಪರಿಣಾಮ ಬೀಳಬಹುದು ಎಂದು ಸಂಘಗಳು ಅಭಿಪ್ರಾಯಪಟ್ಟಿವೆ. ಫಾಸ್ಟ್ಯಾಗ್ ಇಲ್ಲದವರು ಕ್ಯೂಆರ್ ಕೋಡ್ ಮೂಲಕ ಪಾವತಿಸಬೇಕಾಗಿದ್ದು, ಇಲ್ಲವಾದರೆ ದಂಡದ ಸಾಧ್ಯತೆ ಇದೆ. ಮೊಬೈಲ್ ನೆಟ್ವರ್ಕ್ ಸಮಸ್ಯೆಗಳೂ ಆತಂಕ ಮೂಡಿಸಿವೆ.






















































