
ಹೈದರಾಬಾದ್: ಟಾಲಿವುಡ್ ಜೋಡಿ ರಶ್ಮಿಕ ಮಂದಣ್ಣ- ವಿಜಯ ದೇವರಕೊಂಡ ಮದುವೆ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದು ಇದೀಗ ಈ ಜೋಡಿಯ ಮದುವೆ ದಿನದ ಕುರಿತು ಸುದ್ದಿಯೊಂದು ಹೊರಬಿದ್ದಿದೆ.
ಇದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಕಾರ್ಯಕ್ರಮವು ಹೈದರಾಬಾದ್ ನ ದೇವರಕೊಂಡ ಅವರ ನಿವಾಸದಲ್ಲಿ ಆತ್ಮೀಯರ ಸಮ್ಮುಖದಲ್ಲಿ ನೆರವೇರಿದ್ದು ಇದೀಗ ಮದುವೆ ದಿನಾಂಕವು ಅಧಿಕೃತವಾಗಿ ಪ್ರಕಟಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಜೋಡಿ 2026ರ ಫೆಬ್ರವರಿ 26ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸದ್ಯ ರಶ್ಮಿಕಾ ಮತ್ತು ದೇವರಕೊಂಡ ಅವರು ರೋಮ್ ನಲ್ಲಿ ಸುತ್ತಾಡುತ್ತಿದ್ದಾರೆ ಎಂದು ವರದಿಯಾಗಿದ್ದು ಇದುವರೆಗೆ ಈ ಜೋಡಿ ಅಧಿಕೃತವಾಗಿ ತಮ್ಮ ನಿಶ್ಚಿತಾರ್ಥ ಅಥವಾ ಮದುವೆ ಬಗ್ಗೆ ಎಲ್ಲೂ ಮಾತನಾಡಿಲ್ಲ.





