28.1 C
Udupi
Saturday, April 11, 2026
spot_img
spot_img
HomeBlogಝೋಂಬಿ ಡ್ರಗ್ ಸುದ್ದಿ ನಕಲಿ

ಝೋಂಬಿ ಡ್ರಗ್ ಸುದ್ದಿ ನಕಲಿ

ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಒಂದು ವಿಡಿಯೋ ಬಹಳ ಚರ್ಚೆಗೆ ಗ್ರಾಸವಾಗಿತ್ತು. ರಸ್ತೆಯ ಮಧ್ಯೆ ಒಬ್ಬ ವ್ಯಕ್ತಿ ಹಲವು ಗಂಟೆಗಳ ಕಾಲ ಅಚಲವಾಗಿ ನಿಂತಿರುವ ದೃಶ್ಯ ಅದರಲ್ಲಿ ಕಂಡುಬಂದಿದ್ದು, ಇದನ್ನು “ಝೋಂಬಿ ಡ್ರಗ್” ಸೇವನೆಯ ಪರಿಣಾಮ ಎಂದು ಹೇಳಲಾಗಿತ್ತು. ಆದರೆ ಈ ಘಟನೆ ಕುರಿತು ನಗರ ಪೊಲೀಸರು ತನಿಖೆ ನಡೆಸಿದ ಬಳಿಕ, ವಿಡಿಯೋಗೆ ಸಂಬಂಧಿಸಿದಂತೆ ಹರಡಲಾಗಿದ್ದ ಮಾಹಿತಿ ತಪ್ಪು ಎಂದು ಸ್ಪಷ್ಟಪಡಿಸಿದರು.

ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಈ ಪ್ರಕರಣದಲ್ಲಿ ಯಾವುದೇ ರೀತಿಯ “ಝೋಂಬಿ ಡ್ರಗ್” ಸಂಪರ್ಕ ಇಲ್ಲ ಎಂದು ತಿಳಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, “ಝೋಂಬಿ ಡ್ರಗ್” ಎಂಬುದು ನಿಜವಲ್ಲದ ಸಂಗತಿ. ಜನರಲ್ಲಿ ಅನಗತ್ಯ ಭಯ ಹುಟ್ಟಿಸುವ ರೀತಿಯಲ್ಲಿ ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ಅವರು ಎಚ್ಚರಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿ ಹಂಚುವ ಮುನ್ನ ಅದರ ಸತ್ಯಾಸತ್ಯತೆ ಪರಿಶೀಲಿಸುವುದು ಅತ್ಯಂತ ಮುಖ್ಯವಾಗಿದ್ದು, ತಪ್ಪು ಮಾಹಿತಿಯಿಂದ ಸಮಾಜದಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page