
ಜೆಸಿಐ ಭಾರತ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿ “Outstanding Digital Influencer Award” (ODI)ಪ್ರಥಮವಾಗಿ ಜೆಸಿಐ ಕಾರ್ಕಳದಿಂದ ಜೇಸಿಯೇತರ ವಿಭಾಗದಲ್ಲಿ nominee ಆಗಿ ವಂದನ ರೈ ಕಾರ್ಕಳ ಇವರು ಆಯ್ಕೆಯಾಗಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ – ವಿಷಯಗಳ ಪರಿಕಲ್ಪನೆಗಳು, ಅತೀ ಹೆಚ್ಚು ಫಾಲೋವರ್ಸ್ ಹಾಗೂ ವೀಡಿಯೋಗಳ ಅತೀ ಹೆಚ್ಚಿನ ವೀಕ್ಷಣೆ, ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಡಿಸೆಂಬರ್ 27 ರಿಂದ 29 ರವರೆಗೆ ಚೆನ್ನೈಯಲ್ಲಿ ನಡೆಯಲಿರುವ ರಾಷ್ಟ್ರೀಯ ಸಮ್ಮೇಳನದಲ್ಲಿ ,ಈ ಪ್ರಶಸ್ತಿಯನ್ನು ಶ್ರೀಮತಿ ವಂದನ ರೈ ಅವರು ಸ್ವೀಕರಿಸಲಿದ್ದಾರೆ.





