
ಮಕ್ಕಳಲ್ಲಿ ನಾಯಕತ್ವ ಬೆಳೆಸಲು ಶಾಲಾ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯೆ ಮತ್ತು ಸಂಸ್ಕಾರವನ್ನು ಬೇರೆಯವರಿಂದ ಕದ್ದು ಕಲಿಯಬಹುದು. ಸಂಸತ್ತಿನ ಸದಸ್ಯರು ಮುಖ್ಯವಾಗಿ ಶಿಸ್ತು ಮತ್ತು ಸ್ವಚ್ಛತೆಗೆ ಗಮನಹರಿಸಬೇಕು ಎಂದು ಕಾರ್ಕಳದಲ್ಲಿ ವಕೀಲರಾಗಿರುವ ಜೇಸಿ ವಿಖ್ಯಾತ್ ಜೈನ್ ರವರು ಶಾಲಾ ಸಂಸತ್ತಿನ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜೆಸಿಐ ಅಧ್ಯಕ್ಷೆ ಜೆಸಿ ಶ್ವೇತಾ ಜೈನ್ ರವರು ಮಾತನಾಡಿ, ನಾಯಕತ್ವ ನಿಮಗೆ ವಿದ್ಯಾರ್ಥಿ ಜೀವನದಲ್ಲಿ ಸಿಕ್ಕಿದೆ. ಅದನ್ನು ಸರಿಯಾಗಿ ನಿವ೯ಹಿಸಿಕೊಂಡು ಹೋಗಿ ಎಂದು ಹೇಳಿದರು.
ಶಾಲಾ ಅಧ್ಯಕ್ಷರಾದ ಜೆಸಿ ಚಿತ್ತರಂಜನ್ ಶೆಟ್ಟಿಯವರು, ಅಧಿಕಾರ ಸಿಗುವಾಗ ಖುಷಿಯಾಗುತ್ತದೆ. ಅದನ್ನು ಸರಿಯಾಗಿ ಸರಿತೂಗಿಸಿಕೊಂಡು ಹೋಗಬೇಕು. ನಿಮ್ಮ ಬ್ಯಾಜಿನ ಘನತೆಯ ಬಗ್ಗೆ ತಿಳಿದುಕೊಳ್ಳಿ. ಪ್ರಜಾಪ್ರಭುತ್ವ ಬಹಳ ಹಿಂದೆ ಆರಂಭವಾಗಿದೆ. ಕಳಿಂಗದಲ್ಲಿ ಪ್ರಜಾ ಪ್ರಭುತ್ವವಿತ್ತು, ರಾಜಪ್ರಭುತ್ವ ಕಾಲದಲ್ಲಿ ಸಂಸದೀಯ ನಡಾವಳಿಯಿತ್ತು. ರಾಬಟ್‌೯ ಪಾಲಿ೯ಮೆಂಟಿನ ಬಗ್ಗೆ ಪುಸ್ತಕ ಬರೆದಿದ್ದಾನೆ. ಶಾಲೆಯ ಸಂಸತ್ತಿನ ಸದಸ್ಯರು ಒಳ್ಳೆಯ ರಿಸಲ್ಟ್, ಕ್ರೀಡೆ, ಪ್ರತಿಭಾ ಕಾರಂಜಿಗಳಲ್ಲೂ ಕೀತಿ೯ ತರುವ ಜವಬ್ದಾರಿ ಹೊಂದಿದ್ದಾರೆ. ಈ ಪಾಲಿ೯ಮೆಂಟ್ ಕನಾ೯ಟಕ ಲೋಕ ಸಭೆಗೆ ಒಳ್ಳೆಯ ನಾಯಕರನ್ನು ಸೃಷ್ಟಿಸಲಿ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೆಸಿ ಚಿತ್ತರಂಜನ್ ಶೆಟ್ಟಿ ಯವರು, ಜೆಸಿ ವಿಖ್ಯಾತ್ ಜೈನ್, ಜೆಸಿ ಶ್ವೇತಾ ಜೈನ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ರಾಜ್ ರವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಸಂಯೋಜನೆಯನ್ನು ಶಿಕ್ಷಕಿಯಾದ ಶ್ರೀಮತಿ ರಕ್ಷಾ ಶೆಟ್ಟಿ, ಶ್ರೀಮತಿ ಸ್ನೇಹಲತಾ ಕುಮಾರಿ ರಕ್ಷಾ ರವರು ನಿರ್ವಹಿಸಿದರು