
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಮಲ್ಲೇಶ್ವರಂ 6ನೇ ಅಡ್ಡರಸ್ತೆ ಬೆಂಗಳೂರು ಹಾಗೂ ಸರಕಾರಿ ಜೂನಿಯರ್ ಕಾಲೇಜು ಬೈಲೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಜೇಸೀಸ್ ಶಾಲೆಯ 13 ವಿದ್ಯಾರ್ಥಿಗಳು ಭಾಗವಹಿಸಿದ್ದು, ಹೆಚ್ಚಿನ ವಿದ್ಯಾರ್ಥಿಗಳು 70 %ಕ್ಕಿಂತ ಹೆಚ್ಚಿನ ಅಂಕ ಗಳಿಸಿರುತ್ತಾರೆ. ಅದರಲ್ಲಿ ಮಾನ್ವಿ 85.67%, ಹಮ್ದಾನ್ 82.33%, ಶ್ರೇಯಸ್ 79% , ಪ್ರೇಕ್ಷ ಹೆಚ್ ಶೆಟ್ಟಿ 75.83%, ಸಿದ್ದಿ ಯ ಶೆಟ್ಟಿ 73.83% , ಶಮಿಕ ಎಸ್ ಸುವರ್ಣ 71.17% ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಮತ್ತು ಡಿಯೋಲಾ ಕ್ಯಾಸ್ತೆಲಿನೊ 69.83%, ಸಿಂಧೂರ ಕಾರಂತ್ 68.83%, ಶಾರ್ವರಿ ಕೆ 65%, ಭವಿತ್ ಹರೀಶ್ ಗುಡಿಗಾರ್ 64.67% ಇವರು ಪ್ರಥಮ ಶ್ರೇಣಿ ಯಲ್ಲಿ ಹಾಗೂ ರಿಶಾ ಸಾಲಿಯಾನ್ 58.33%, ಸಾತ್ವಿ 58.5%, ಅಶ್ವಿನಿ 52.83% ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ಇವರನ್ನು ನಮ್ಮ ಶಾಲಾ ಚಿತ್ರಕಲಾ ಅಧ್ಯಾಪಕರಾದ ಸುಜೇಂದ್ರ ಕಾರ್ಲ ಇವರು ತರಬೇತಿಗೊಳಿಸಿದರು.
ಇವರನ್ನು ಶಾಲಾ ಅಧ್ಯಕ್ಷರು ಮತ್ತು ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಮುಖ್ಯೋಪಾಧ್ಯಾಯಾಯಿನಿಯವರು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದರು.








