
ಜೇಸಿಐ ಭಾರತ ವಲಯ 15ರ ದುಂದುಭಿ ಮಧ್ಯಂತರ ಸಮ್ಮೇಳನ 2025 ಜೆಸಿಐ ಬೆಳ್ಮಣ್ ಆತಿಥ್ಯದಲ್ಲಿ ಸನ್ಮಾನ ರೆಸಿಡೆನ್ಸಿ ನಿಟ್ಟೆಯಲ್ಲಿ ನಡೆಯಿತು.
52 ವರ್ಷ ಇತಿಹಾಸವುಳ್ಳ ಪ್ರತಿಷ್ಟಿತ ಘಟಕ ಜೇಸಿಐ ಕಾರ್ಕಳ, ತನ್ನ ಧನಾತ್ಮಕ ವ್ಯಕ್ತಿತ್ವ ವಿಕಸನ, ಸಾರ್ವಜನಿಕ ಸಂಪರ್ಕ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಕಾರ್ಕಳ ಪರಿಸರದಲ್ಲಿ ಮನೆ ಮಾತಾಗಿರುವ ಸಂಸ್ಥೆ ಜೇಸಿಐ ಕಾರ್ಕಳ. ಜೆಸಿಐ ಕಾರ್ಕಳ ಘಟಕಕ್ಕೆ ಹಲವಾರು ಮನ್ನಣೆಗಳು ದೊರಕಿದೆ. Local organisation winner ಪ್ರಶಸ್ತಿ, outstanding president Runner ಪ್ರಶಸ್ತಿ, ಡೈಮಂಡ್ ಘಟಕ ಪ್ರಶಸ್ತಿ, ಹಾಗೂ ಇತರ ಮನ್ನಣೆಗಳು ದೊರಕಿದೆ.

ಸಿಂಧೂರ ವೈಭವ ನೃತ್ಯ ಸ್ಪರ್ಧೆಯಲ್ಲಿ ಅಧ್ಭುತ ನೃತ್ಯ ಪ್ರದರ್ಶನವನ್ನು ನೀಡಿ, ಜೆಸಿಐ ಕಾರ್ಕಳ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ವಲಯ ಅಧ್ಯಕ್ಷ ಜೇಸಿ ಸೆನೆಟರ್ ಅಭಿಲಾಶ್ ಬಿ ಎ ಪ್ರಶಸ್ತಿಯನ್ನು ವಲಯ ಉಪಾಧ್ಯಕ್ಷರಾದ JFS ಅನ್ವೇಷ್ ಶೆಟ್ಟಿ ಇವರ ಸಮ್ಮುಖದಲ್ಲಿ, ಜೆಸಿಐ ಕಾರ್ಕಳದ ಅಧ್ಯಕ್ಷರಾದ ಜೆಸಿ ಶ್ವೇತಾ ಎಸ್ ಜೈನ್ ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ JFS ಕಾರ್ತಿಕೇಯ ಮಧ್ಯಸ್ಥ ,ಪೂರ್ವ ವಲಯ ಅಧಿಕಾರಿ ಜೇಸಿ ಪದ್ಮಪ್ರಸಾದ್ ಜೈನ್, JAC Parliamenterian ಜೆಸಿ ಸಮದ್ ಖಾನ್, ಪೂರ್ವಾದ್ಯಕ್ಷರಾದ ಜೇಸಿ ಸಂತೋಷ್ ಕುಮಾರ್, ಜೇಸಿ ದಿವ್ಯ ಸ್ಮಿತಾ ಭಟ್ ಕುಂದಾಪುರ ಸಿಟಿ ಸಂಸ್ಥಾಪಕ ಅಧ್ಯಕ್ಷರು ಜೇಸಿ ಹುಸೇನ್ ಹೈಕಾಡಿ ಹಾಗೂ ಜೇಸಿಐ ಕಾರ್ಕಳ ಘಟಕ ದ ಸದಸ್ಯರು ಉಪಸ್ಥಿತರಿದ್ದರು.




















