28.8 C
Udupi
Saturday, May 9, 2026
spot_img
spot_img
HomeBlogಜೆಸಿಐ ಕಾರ್ಕಳದ ವತಿಯಿಂದ ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ದಿನಗಳ ಕಾಲ ಆತ್ಮ...

ಜೆಸಿಐ ಕಾರ್ಕಳದ ವತಿಯಿಂದ ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ದಿನಗಳ ಕಾಲ ಆತ್ಮ ವಿಕಾಸ ಶಿಬಿರ

ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೇಸಿಐ ಕಾರ್ಕಳ ವತಿಯಿಂದ ಆತ್ಮ ವಿಕಾಸ ಶಿಬಿರ ಕಾರ್ಯಕ್ರಮ ದ ಉದ್ಘಾಟನೆ ಎಪ್ರಿಲ್ 1ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಉದ್ಯಮಿಗಳು ಬೋಳ ಪ್ರಶಾಂತ್ ಕಾಮತ್ ಉದ್ಘಾಟಿಸಿ ಮಕ್ಕಳಿಗೆ ಶಿಬಿರದ ಮಹತ್ವದ ಬಗ್ಗೆ ತಿಳಿ ಹೇಳಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾದ ಜೇಸಿ ಚಿತ್ತರಂಜನ್ ಶೆಟ್ಟಿಯವರು ಸಂಸ್ಕೃತಿ ಉಳಿಸುವಲ್ಲಿ ಇಂದಿನ ಮಕ್ಕಳ ಪಾತ್ರ ಹಾಗೂ ಪೋಷಕರ ಪಾತ್ರದ ಬಗ್ಗೆ ವಿಶೇಷವಾದ ಮಾಹಿತಿಯನ್ನು ನೀಡಿದರು ಹಾಗೂ ನಮ್ಮ ಭಾರತದ ಪರಂಪರೆ ಸಂಸ್ಕೃತಿ ಸಂಸ್ಕಾರ ಇದರ ಆಚಾರ ವಿಚಾರ ಮಕ್ಕಳಿಗೆ ಅಗತ್ಯವಾಗಿ ಬೇಕಾಗಿದೆ. ಪ್ರತಿವರ್ಷ ಬೇಸಿಗೆ ಶಿಬಿರ ನಡೆಯುತ್ತದೆ ಆದರೆ ಈ ವರ್ಷ ಜೆಸಿಐ ಕಾರ್ಕಳ ವಿಶೇಷ ಮುತುವರ್ಜಿ ವಹಿಸಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿದೆ ಎಂದು ಅಭಿನಂದಿಸಿ ಶುಭವನ್ನು ಹಾರೈಸಿದರು.

ಅತಿಥಿಗಳಾದ ಖ್ಯಾತ ಉದ್ಯಮಿಗಳು ಹಾಗೂ ಕಾರ್ಕಳ ಜೇಸಿಐ ನ ಉಪಾಧ್ಯಕ್ಷರು ಜೇಸಿ ವಿಖ್ಯಾತ್ ಶೆಟ್ಟಿ ಅವರು ಮಾತನಾಡಿ ವಿಶೇಷ ಸಹಕಾರವನ್ನು ನೀಡಿ ತನ್ನ ಬಾಲ್ಯದ ಜೀವನವನ್ನು ನೆನಪಿಸಿಕೊಂಡು ಮಕ್ಕಳಿಗೆ ಇಂತಹ ಶಿಬಿರ ಅಗತ್ಯ ಇದೆ ಎನ್ನುವ ಭಾವನೆಯೊಂದಿಗೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಅತಿಥಿಗಳಾದ ಜೇಸಿಐ ಕಾರ್ಕಳದ ಪೂರ್ವ ಅಧ್ಯಕ್ಷರು ಜೇಸಿ ಪ್ರಸಾದ್ ಐಸಿರ ಅವರು ಕುಟುಂಬಗಳ ಸಂಬಂಧಗಳ ಮಹತ್ವದ ಬಗ್ಗೆ ಹಾಗೂ ಪಠ್ಯೇತರ ಚಟುವಟಿಕೆಯ ಬಗ್ಗೆ ಮಾಹಿತಿಯನ್ನು ನೀಡಿ, ಕಾರ್ಯಕ್ರಮವನ್ನು ಆಯೋಜಿಸಿದ ಸಂಸ್ಥೆಗೆ ಅಭಿನಂದಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಜೇಸಿಐ ಕಾರ್ಕಳದ ಪೂರ್ವ ಅಧ್ಯಕ್ಷರು, ಸದಸ್ಯರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಹ ಶಿಕ್ಷಕರು ಉಪಸ್ಥಿತರಿದ್ದರು. ಜೇಸಿ ರೇವತಿ ಶೆಟ್ಟಿ ಅವರು ಅತಿಥಿಗಳನ್ನು ಆಹ್ವಾನಿಸಿ , ಜೇಸಿಐ ಕಾರ್ಕಳ ಅಧ್ಯಕ್ಷರಾದ ಜೇಸಿ ಶ್ವೇತಾ ಎಸ್ ಜೈನ್ ಅವರು ಸ್ವಾಗತಿಸಿ, ಕಾರ್ಯದರ್ಶಿ ಜೇಸಿ ಸುಷ್ಮಿತಾ ರಾವ್ ಧನ್ಯವಾದವನ್ನು ನೆರವೇರಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page