61 ಬಾರಿ ರಕ್ತದಾನ ಮಾಡಿದ ನಿರಂಜನ್ ಜೈನ್ ಇವರಿಗೆ “ಸೆಲ್ಯೂಟ್ ದ ಸೈಲೆಂಟ್ ವರ್ಕ್” ಗೌರವ

ಕಾರ್ಕಳ: ವಲಯ 15 ರ ಪ್ರತಿಷ್ಟಿತ ಘಟಕ ಜೆಸಿಐ ಕಾರ್ಕಳ ವತಿಯಿಂದ ರಕ್ತ ದಾನ ದಿನಾಚರಣೆಯ ಪ್ರಯುಕ್ತ ,ಜೇಸಿಐ ಕಾರ್ಕಳ, ರೋಟರಿ ಸಂಸ್ಥೆ, ಸ್ವಚ್ಛ ಕಾರ್ಕಳ ಬ್ರಿಗೇಡ್ ಮತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಪದಾಧಿಕಾರಿಯಾಗಿ ,ಯಶಸ್ವಿ ಉದ್ಯಮಿಯಾಗಿ, ಸಾಧನೆಗಳ ಮೂಲಕ ಪ್ರಶಸ್ತಿ ಗಳಿಸಿ 1995 ರಿಂದೀಚೆಗೆ 61 ಬಾರಿ ರಕ್ತದಾನ ಮಾಡಿ ಜೀವಗಳಿಗೆ ಜೀವ ನೀಡಿ ರಕ್ತದಾನ ಶ್ರೇಷ್ಠದಾನ ಮಾತಿಗೆ ನಿಜ ಅರ್ಥವನ್ನು ನೀಡಿದ ನಿರಂಜನ್ ಜೈನ್ ಇವರಿಗೆ ಜೇಸಿಐ ಕಾರ್ಕಳದಿಂದ “Salute The Silent Work” ಎಂಬ ಗೌರವನ್ನು ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಜೇಸಿಐ ಕಾರ್ಕಳದ ಅಧ್ಯಕ್ಷರು ಶ್ವೇತಾ ಎಸ್ ಜೈನ್, ಪೂರ್ವ ವಲಯ ಅಧ್ಯಕ್ಷರು ಹಾಗೂ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಚಿತ್ತರಂಜನ್ ಶೆಟ್ಟಿ, ವಲಯ ಉಪಾಧ್ಯಕ್ಷರಾದ CA ಅನ್ವೇಶ್ ಶೆಟ್ಟಿ, ಸುಂದರ್ ಹೆಗ್ಡೆ ನಿವೃತ್ತ ಮುಖ್ಯೋಪಾಧ್ಯಾಯರು, ನಿರಂಜನ್ ಜೈನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪೂರ್ವ ವಲಯ ಉಪಾಧ್ಯಕ್ಷರು ಪೂರ್ವ ವಲಯ ಅಧಿಕಾರಿಗಳು ವಲಯ ಅಧಿಕಾರಿಗಳು ಜೆಸಿಐ ಕಾರ್ಕಳದ ಪೂರ್ವ ಅಧ್ಯಕ್ಷರು ಹಾಗೂ ದೇಸಿಯ ಸದಸ್ಯರು ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
ರೇವತಿ ಶೆಟ್ಟಿ ಅತಿಥಿ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು, ಶ್ವೇತಾ ಎಸ್ ಜೈನ್ ಸ್ವಾಗತಿಸಿದರು . ಶಿವಕುಮಾರ್ ಜೆಸಿವಾಣಿ ವಾಚಿಸಿ, ಕಾರ್ಯದರ್ಶಿ ಸುಶ್ಮಿತಾ ಧನ್ಯವಾದ ನೆರವೇರಿಸಿದರು.
