
ಕಾರ್ಕಳ: ರಾಷ್ಟ್ರದ ಪ್ರತಿಷ್ಟಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್
ಟೆಕ್ನಾಲಜಿ (ಐಐಟಿ)ಗಳ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರಮಟ್ಟದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅನಂತ್ ಎನ್ ಕೆ ಸಾಮಾನ್ಯ ವಿಭಾಗದಲ್ಲಿ 11072ನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ. ಇದಕ್ಕೂ ಮೊದಲು ನಡೆದ
ಜೆಇಇ ಮೈನ್ ಪರೀಕ್ಷೆಯಲ್ಲಿ 99.6912 ಪರ್ಸೆಂಟೈಲ್
ಪಡೆದುಕೊಂಡಿದ್ದನು. ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ
ಕೆಸಿಇಟಿ ಫಲಿತಾಂಶದಲ್ಲಿ ಇಂಜಿನಿಯರಿಂಗ್ 57ನೇರ‍್ಯಾಂಕ್ ಪಡೆದುಕೊಂಡಿದ್ದನು. ಪಿಯುಸಿ ವಾರ್ಷಿಕ ಪರೀಕ್ಷಾ
ಫಲಿತಾಂಶದಲ್ಲಿಯೂ 593 ಅಂಕಗಳೊಂದಿಗೆ ರಾಜ್ಯಕ್ಕೆ ಎಂಟನೇ ರ‍್ಯಾಂಕ್
ಪಡೆದಕೊಂಡಿದ್ದನು. ವಿದ್ಯಾರ್ಥಿಯ ಈ ಸಾಧನೆಗೆ ಕ್ರೈಸ್ಟ್ ಕಿಂಗ್
ಆಡಳಿತ ಮಂಡಳಿಯವರು, ಪ್ರಾಚಾರ್ಯರು, ಉಪನ್ಯಾಸಕರು
ಅಭಿನಂದನೆ ಸಲ್ಲಿಸಿದ್ದಾರೆ.



















































