ಮಾಜಿ ಸಂಸದ ಪ್ರತಾಪ್ ಸಿಂಹ,ಶಾಸಕ ವಿ.ಸುನಿಲ್ ಕುಮಾರ್ ಉಪಸ್ಥಿತಿ: ನವೀನ್ ನಾಯಕ್

ಕಾರ್ಕಳ: ಜೂನ್ 2025 ರಲ್ಲಿ ಕೇಂದ್ರ ಸರ್ಕಾರದ 11 ವರ್ಷಗಳು ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಸರ್ಕಾರದ ಸಾಧನೆಗಳನ್ನು ಪ್ರತಿ ನಾಗರಿಕನಿಗೂ ತಲುಪಿಸುವುದು, ಯೋಜನೆಗಳ ಲಾಭವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸೇವೆ, ಸುಕಾಸನ, ಬಡವರ ಕಲ್ಯಾಣ ಹಾಗೂ ವಿಕಸಿತ ಭಾರತದ ಪರಿಕಲ್ಪನೆಯುಳ್ಳ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ.
ಈ ಪ್ರಯುಕ್ತ ಕಾರ್ಕಳ ಬಿಜೆಪಿ ವತಿಯಿಂದ ವಿಕಾಸ ಜನಸೇವಾ ಕಛೇರಿಯಲ್ಲಿ ಜೂನ್ 16 ಬೆಳಿಗ್ಗೆ 10.00 ಗಂಟೆಗೆ ವಿಕಸಿತ ಭಾರತ ಸಂಕಲ್ಪ ಸಭೆಯನ್ನು ಆಯೋಜಿಸಲಾಗಿದ್ದು, ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಮತ್ತು ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್ ಉಪಸ್ಥಿತರಿದ್ದು, ಈ ಸಂದರ್ಭದಲ್ಲಿ ವಿಕಸಿತ ಭಾರತ 2047 ರ ದೃಷ್ಟಿಕೋನ ಹಾಗೂ ಅದರಲ್ಲಿ ನಮ್ಮ ಪಾತ್ರದ ಕುರಿತು ಕಾರ್ಯಗಾರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್ ತಿಳಿಸಿದ್ದಾರೆ.



















