ಶಾಸಕ
ವಿ.ಸುನಿಲ್ ಕುಮಾರ್ ಸಂತಾಪ

ಜಾರಿಗೆ ಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಶ್ರೀ ದಿವಾಕರ್ ಪೂಜಾರಿ ಯವರು ಇಂದು ನಿಧನರಾಗಿರುವುದು ಅತ್ಯಂತ ದುಃಖದ ವಿಚಾರ. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಕ್ಕೆ ಶ್ರೀಯುತರು ಅಪಾರವಾದ ಕೊಡುಗೆಯನ್ನು ನೀಡಿ, ಧಾರ್ಮಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.
ಕಾರ್ಕಳದ ಮುಂಡ್ಕೂರಿನ ಜಾರಿಗೆಕಟ್ಟೆಯಲ್ಲಿ ಶ್ರೀಯುತರ ನೇತೃತ್ವದಲ್ಲಿ ಕೊರಗಜ್ಜ, ಕೊರಗರ ಪಂಜುರ್ಲಿ ಸಹಿತ ವಿವಿಧ ಪರಿವಾರ ಶಕ್ತಿಗಳ ಪುಣ್ಯ ಕ್ಷೇತ್ರಕ್ಕೆ ರಾಜ್ಯ, ಹೊರ ರಾಜ್ಯಗಳಿಂದಲೂ ಸಹಸ್ರಾರು ಭಕ್ತಾದಿಗಳು ಆಗಮಿಸುತ್ತಿದ್ದು ಕ್ಷೇತ್ರದಲ್ಲಿ ಕೋಲ,ಅಗೇಲು ಸೇವೆಗಳು ನಿರಂತರವಾಗಿ ನಡೆಯುತ್ತಿದ್ದವು.
ಅಗಲಿದ ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಮತ್ತು ಅವರ ಕುಟುಂಬ ವರ್ಗ ಜೊತೆಗೆ ಅಪಾರ ಭಕ್ತ ವರ್ಗಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ಕರುಣಿಸಲಿ ಎಂದು ಶಾಸಕ ವಿ.ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.




