
ನವದೆಹಲಿ: ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು RSS ನಿಷೇಧಕ್ಕೆ ಒತ್ತಾಯಿಸುತ್ತಿರುವ ಬಗೆ RSS ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ ‘1991 ರವರೆಗೆ ಸಮಾಜವು ಆರ್ ಎಸ್ಎಸ್ ಅನ್ನು ಎಂದಿಗೂ ಒಪ್ಪಿಕೊಂಡಿರಲಿಲ್ಲ. ಈಗಲೂ ಸಹ ಅವರ ರಾಜಕೀಯ ವಿಭಾಗ ಬಿಜೆಪಿ 38% ಮತ ಪಾಲನ್ನು ಮೀರಿಲ್ಲ. ಇದರರ್ಥ ಜನಸಂಖ್ಯೆಯ 62% ಜನರು ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಇದ್ದಾರೆ. ಹೊಸಬಾಳೆ ಅವರು ಹೆಚ್ಚಿನ ಮಾಧ್ಯಮಗಳನ್ನು ನಿರ್ವಹಿಸುವುದರಿಂದ ಇಂತಹ ಹೇಳಿಕೆಗಳೊಂದಿಗೆ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ’ ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಆರ್ ಎಸ್ ಎಸ್ ನಿಷೇಧಕ್ಕೆ ಒತ್ತಾಯಿಸುತ್ತಿರುವಾಗ ಈ ಕುರಿತು ಪ್ರತಿಕ್ರಿಯಿಸಿದ ದತ್ತಾತ್ರೇಯ ಹೊಸಬಾಳೆ ‘ಈ ಹಿಂದೆ ಕಾಂಗ್ರೆಸ್ ಹಲವು ಬಾರಿ ಆರ್ ಎಸ್ ಎಸ್ ಅನ್ನು ನಿಷೇಧಿಸಲು ಪ್ರಯತ್ನಿಸಿತ್ತು. ಆಗ ಆಗದಂತಹ ಅನುಭವಗಳಿಂದ ಖರ್ಗೆ ಪಾಠ ಕಲಿಯಬೇಕು. ಅದರ ಹಿರಿಯ ನಾಯಕರೊಬ್ಬರು ನಿಷೇಧ ಹೇರಲು ಮೂರು ಬಾರಿ ಪ್ರಯತ್ನಿಸಿದರು. ಆಗ ಏನಾಯಿತು? ನ್ಯಾಯಾಲಯ ಹಾಗೂ ಜನ ಏನು ತೀರ್ಪು ನೀಡಿದ್ದರೂ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಕಿಡಿಕಾರಿದ್ದರು.






















































