
ಸೋಮವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಂಡವು ಪುರಸಭೆಯ ಎರಡನೇ ವಾರ್ಡ್ ಬಂಗ್ಲೆಗುಡ್ಡೆ ಶ್ರೀದೇವಿ ಕಾಲೋನಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮಾಜ ಮಂದಿರ ಕಟ್ಟಡ ಕಾಮಗಾರಿಯ ವೀಕ್ಷಣೆ ನಡೆಸಿತು.
ವಾರ್ಡ್ ಸದಸ್ಯೆ ಪ್ರತಿಮಾ ರಾಣೆ ಅವರ ವಿಶೇಷ ಪ್ರಯತ್ನದಲ್ಲಿ ಸ್ಥಳೀಯರ ಬೇಡಿಕೆಯಂತೆ ಈ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಸ್ಥಳಕ್ಕೆ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ, ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್, ಎಂಜಿನಿಯರ್ ರೇಣುಕಾ, ಗುತ್ತಿಗೆದಾರರಾದ ಅನಂತ ಕೃಷ್ಣ ಶೆಟ್ಟಿ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.
ಈ ಕುರಿತು ಮಾತನಾಡಿದ ಪುರಸಭೆ ಸದಸ್ಯರಾದ ಪ್ರತಿಮಾ ರಾಣೆ ಸ್ಥಳೀಯರ ಬೇಡಿಕೆಯಂತೆ ವಿಶೇಷ ಪ್ರಯತ್ನ ನಡೆಸಿ ಪುರಸಭೆ ವತಿಯಿಂದ ಸಮಾಜ ಮಂದಿರ ಕಟ್ಟಡದ ನಿರ್ಮಾಣಕ್ಕೆ ಪ್ರಯತ್ನಿಸಿದ್ದೇನೆ. ಸಹಕರಿಸಿದ ಪುರಸಭೆ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.



















