
ಜನನಿ ಮಿತ್ರ ಮಂಡಳಿ ವಾಂಟ್ರಾಯಿ(ರಿ.) ಪದವು ಇದರ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಂಬಾಡಿ ಪದವು ಇಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿಯವರಾದ ಹುಕ್ರಪ್ಪ ಗೌಡ, ಗಸ್ತು ಅರಣ್ಯ ಪಾಲಕರಾದ ಸುರೇಶ್ ಇವರು ಹಾಜರಿದ್ದು ಮಕ್ಕಳಿಗೆ ಗಿಡಗಳ ಮಹತ್ವದ ಬಗ್ಗೆ ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯರು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು ಶಿಕ್ಷಕವೃಂದ ಹಾಜರಿದ್ದು ಜನನಿ ಮಿತ್ರ ಮಂಡಳಿ ವಾಂಟ್ರಾಯಿ(ರಿ.) ಪದವು ಇದರ ಅಧ್ಯಕ್ಷರಾದ ದಿವಾಕರ ಎಂ ಬಂಗೇರ ಎಲ್ಲರನ್ನೂ ಸ್ವಾಗತಿಸಿದರು ಸದಾನಂದ ಯಾನೆ ಮೋಹನ್ ಕಾರ್ಯಕ್ರಮ ನಿರೂಪಣೆ ಮಾಡಿ ಕಾರ್ಯದರ್ಶಿಗಳಾದ ಪ್ರವೀಣ್ ಮೂಲ್ಯ ಇವರು ಧನ್ಯವಾದ ಸಲ್ಲಿಸಿದರು.






















































