
ಹೊಸದಿಲ್ಲಿ: ಇಟಲಿ ಮತ್ತು ಅಮೆರಿಕಾದ ವಿವಿ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ 2020-24ರ ಅವಧಿಯಲ್ಲಿ ಕರೋನ ಸೋಂಕಿನಿಂದ ಜಗತ್ತಿನಾದ್ಯಂತ 25 ಲಕ್ಷಕ್ಕೂ ಅಧಿಕ ಜನರನ್ನು ಕಾಪಾಡುವಲ್ಲಿ ಕೋವಿಡ್ ಲಸಿಕೆಗಳಿಂದ ಸಾಧ್ಯವಾಗಿದೆ ಎಂದು ವರದಿ ಬಿಡುಗಡೆ ಮಾಡಿದೆ.
ಪ್ರತಿ 5,400 ಡೋಸ್ ಗಳಿಗೆ ಒಂದು ಸಾವು ತಪ್ಪಿಸಲಾಗಿದ್ದು ಲಸಿಕೆಯಿಂದಾಗಿ ಜಗತ್ತಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯರ ಸಾವನ್ನು ತಪ್ಪಿಸಲಾಗಿದೆ ಎಂದು ವರದಿ ಮಾಡಿದೆ.
ಇದಲ್ಲದೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರು ಶುಕ್ರವಾರ ಕೋವಿಡ್ ಲಸಿಕೆಯಿಂದ ಹೃದಯಘಾತವಾಗುವ ಅಪಾಯ ಇಲ್ಲ ಎಂಬುದನ್ನು ತಿಳಿಸಿದ ಅವರು ಹೃದಯಾಘಾತಕ್ಕು ಕೋವಿಡ್ ಲಸಿಕೆಗೂ ಸಂಬಂಧವಿಲ್ಲ. ಈ ಕುರಿತು ಐಸಿಎಂಆರ್ ದೇಶದ ಪ್ರಮುಖ 25 ಆಸ್ಪತ್ರೆಗಳನ್ನೊಳಗೊಂಡಂತೆ ಅಧ್ಯಯನ ನಡೆಸಿದ್ದು ಅಧ್ಯಯನದಲ್ಲಿ ಹೃದಯಾಘಾತಕ್ಕೆ ಹಲವಾರು ಕಾರಣಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.





