
ಬೆಂಗಳೂರು: ಐಪಿಎಲ್ ಕ್ರಿಕೆಟ್ ಹಬ್ಬಕ್ಕೆ ಕೌಂಟ್ಡೌನ್ ಆರಂಭವಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತಾ ವ್ಯವಸ್ಥೆಯನ್ನು ಕಠಿಣಗೊಳಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಮಾಹಿತಿ ನೀಡಿದ್ದು, ಸ್ಟೇಡಿಯಂ ಸುತ್ತಮುತ್ತ ಮೂರು ಹಂತದ ಭದ್ರತಾ ವಲಯವನ್ನು ರೂಪಿಸಲಾಗಿದೆ. ಆರ್ಎಎಫ್, ಗರುಡ ಪಡೆ ಹಾಗೂ ಪಿಕಪ್ ಸ್ಕ್ವಾಡ್ ಸೇರಿ ಒಟ್ಟು 2,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು, ಟಿಕೆಟ್ ಇಲ್ಲದೆ ಮೈದಾನಕ್ಕೆ ಬರಬಾರದು ಎಂದು ಜನರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆಫ್ಲೈನ್ ಟಿಕೆಟ್ ಸಿಗುತ್ತದೆ ಎಂಬ ಭ್ರಮೆಯಲ್ಲಿ ಬಾರದಂತೆ ಎಚ್ಚರಿಕೆ ನೀಡಿದ ಅವರು, ಸ್ಟೇಡಿಯಂ ಸುತ್ತಲಿನ ರಸ್ತೆಗಳಲ್ಲೂ ಅನಾವಶ್ಯಕವಾಗಿ ನಿಲ್ಲಲು ಅವಕಾಶ ಇರದು ಎಂದು ಸ್ಪಷ್ಟಪಡಿಸಿದ್ದಾರೆ. ಟಿಕೆಟ್ ಇಲ್ಲದವರು ಮನೆಯಿಂದಲೇ ಪಂದ್ಯ ವೀಕ್ಷಿಸಬೇಕು ಎಂದು ತಿಳಿಸಿದ್ದಾರೆ.






















































