ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ..

ಗುರುಕುಲ 75 ಅಮೃತ ಮಹೋತ್ಸವ ಕಾರ್ಯಕ್ರಮದ ತಿಂಗಳ ಸರಣಿ ಕಾರ್ಯಕ್ರಮದ ಪ್ರಾರಂಭೋತ್ಸವವು ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ವಿದ್ಯಾರ್ಥಿಗಳು ಸಂಚಾಲಕರು ಹಾಗೂ ಮುಖ್ಯ ಅತಿಥಿಗಳು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಕುಲಶಾಲಾ ಸಂಚಾಲಕರಾದ ಸುಧಾಕರ ಡೊಂಗ್ರೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ನಾಗಭೂಷಣ ಮರಾಠೆ ಆಡಳಿತ ಮಂಡಳಿಯ ಕಾರ್ಯದರ್ಶಿ ಗೀತಾ ಸೇರಿಗಾರ್ ಮತ್ತು ಸ್ಪರ್ಧೆಯ ತೀರ್ಪುಗಾರರಾದ ವಸುಧಾ ಮತ್ತು ಭಾರತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಮೊದಲ ತಿಂಗಳ ಸರಣಿ ಕಾರ್ಯಕ್ರಮದ ಸಮೂಹ ದೇಶಭಕ್ತಿ ಗೀತೆಯ ಸ್ಪರ್ಧೆಯು ಜರಗಿತು ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ರಕ್ಷಿತಾ ನಿರ್ವಹಿಸಿ ಶಿಕ್ಷಕಿ ವಸಂತಿ ಸ್ವಾಗತಿಸಿ ಶಿಕ್ಷಕಿ ಜ್ಯೋತಿ ವಂದನಾರ್ಪಣೆಯನ್ನು ಮಾಡಿದರು ಈ ಸ್ಪರ್ಧೆಯಲ್ಲಿ ಮಾಳ ಗ್ರಾಮದ ಸುತ್ತಮುತ್ತಲಿನ ಶಾಲೆಯ ಹಿರಿಯ ಮತ್ತು ಕಿರಿಯ ವಿಭಾಗದ 9 ಶಾಲೆಗಳು ಭಾಗವಹಿಸಿದ್ದವು.





















