
ಉಡುಪಿ: ಮಣಿಪಾಲದ ಈಶ್ವರ ನಗರದ ಎಂಐಟಿ ಕಾಲೇಜಿನ ಮುಂಭಾಗ ಬುಧವಾರ ಸಂಜೆ ಮಹಿಳೆಯೊಬ್ಬರು ಖಾಸಗಿ ಬಸ್ ನ ಚಕ್ರದಡಿಗೆ ಸಿಲುಕಿ ಮೃತಪಟ್ಟ ಘಟನೆ ವರದಿಯಾಗಿದೆ.
ಬಸ್ಸು ಉಡುಪಿಯಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದ್ದು ,ಮಹಿಳೆಯ ದೇಹ ಗುರುತು ಹಿಡಿಯಲಾರದಷ್ಟು ಛಿದ್ರ ಛಿದ್ರ ಗೊಂಡಿದೆ ಎನ್ನಲಾಗಿದೆ.