
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾಸಿಕ ‘ಮನ್ ಕೀ ಬಾತ್’ನಲ್ಲಿ ಮಾತನಾಡಿ ಖಾದ್ಯ ತೈಲವನ್ನು ಶೇ.10ರಷ್ಟು ಕಡಿಮೆ ಸೇವಿಸುವ ಮೂಲಕ ಬೊಜ್ಜು ಇಳಿಸಬಹುದು ಎಂದು ದೇಶದ ಜನತೆಗೆ ಸಲಹೆ ನೀಡಿದ್ದಾರೆ..
‘ಇತ್ತೀಚಿನ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೊಜ್ಜಿನ ಬಗ್ಗೆ ಮಾತನಾಡಿದ್ದೆ. ಅದು ಹೊಸ ಚರ್ಚೆ ಹುಟ್ಟುಹಾಕಿದೆ. ನಮ್ಮ ದೇಶವನ್ನು ಆರೋಗ್ಯದಾಯಕ ದೇಶ ಮಾಡಲು ಬೊಜ್ಜಿನ ಸಮಸ್ಯೆ ನಿವಾರಿಸಲೇಬೇಕು. ಖಾದ್ಯ ತೈಲದ ಬಳಕೆಯನ್ನು ಶೇ.10ರಷ್ಟು ಕಡಿಮೆ ಮಾಡುವುದು ಬೊಜ್ಜಿನ ಸಮಸ್ಯೆಗೆ ರಾಮಬಾಣ. ನೀವು ಪ್ರತಿ ತಿಂಗಳು 10% ಕಡಿಮೆ ತೈಲವನ್ನು ಬಳಸೋಣ ಎಂದು ನಿರ್ಧರಿಸಿ. ಅಡುಗೆಗೆ ಎಣ್ಣೆ ಖರೀದಿಸುವಾಗಲೇ ನೀವು 10% ಕಡಿಮೆ ತೈಲ ಖರೀದಿಸಿ. ಇದು ಬೊಜ್ಜು ಕಡಿಮೆ ಮಾಡುವತ್ತ ಒಂದು ಪ್ರಮುಖ ಹೆಜ್ಜೆಯಾಗಲಿದೆ’ ಎಂದು ಕಿವಿಮಾತು ಹೇಳಿದರು.








