
ಕಾರ್ಕಳ: ಶಿಕ್ಷಣ ಕ್ಷೇತ್ರದಲ್ಲಿ ವಿನೂತನ ಪ್ರಯೋಗಾತ್ಮಕ ಪರಿಕಲ್ಪನೆಗಳಿಗೆ ಸದಾಕಾಲ ತೆರೆದುಕೊಳ್ಳುವ ಕಾರ್ಕಳದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್ ಕಿಂಗ್ ಸಂಸ್ಥೆಯ ವಿನೂತನ ಶೈಕ್ಷಣಿಕ ಪರಿಕಲ್ಪನೆ “ಗ್ರೂಮಿಂಗ್ ತರಗತಿ ಹಾಗೂ ಕಿಚನ್ ಲ್ಯಾಬ್” ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರಿಂದ ನಾಳೆ ಉದ್ಘಾಟನೆ ಶಿಕ್ಷಣ ಸಂಸ್ಥೆ ಈಗ ಮತ್ತದೇ ವಿನೂತನ ಮಾದರಿಯ ಪರಿಕಲ್ಪನೆಯನ್ನು ಪರಿಚಯಿಸುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಾಮಾಜಿಕ ವರ್ತನೆ, ಕೌಟುಂಬಿಕ ವಾತಾವರಣದ ಮಹತ್ವ, ಸಮಾಜಮುಖಿ ಗುಣನಡತೆ ರೂಪಿಸಲು ಗ್ರೂಮಿಂಗ್ ತರಗತಿ ಎಂಬ ಮೌಲ್ಯಾಧಾರಿತ ತರಗತಿಗಳನ್ನು ಜೊತೆಗೆ ಅಡುಗೆಯ ಅರಿವು ಮೂಡಿಸಲು ಹಾಗೂ ಆಹಾರ ಸೇವನೆಯ ಶಿಸ್ತಿನ ಪರಿಜ್ಞಾನ ಮೂಡಿಸುವ ಹಿನ್ನೆಲೆಯಲ್ಲಿ ಕಿಚನ್ ಲ್ಯಾಬ್ ಎಂಬ ವಿಶಿಷ್ಟ ಯೋಜನೆಗಳನ್ನು ಈ ಶೈಕ್ಷಣಿಕ ಸಾಲಿನಿಂದ ಆರಂಭಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರೂಮಿಂಗ್ ತರಗತಿಯ ಪಠ್ಯಪುಸ್ತಕ ಬಿಡುಗಡ ಹಾಗೂ ಕಿಚನ್ ಲ್ಯಾಬ್ಉದ್ಘಾಟನೆ ಜೊತೆಗೆ ದ್ವಿತೀಯ ಪಿಯುಸಿಯಲ್ಲಿ ರ್ಯಾಂಕ್ ವಿಜೇತರಿಗೆ ಸನ್ಮಾನ ಕಾರ್ಯಕ್ರಮವನ್ನು ನಾಳೆ ಅಂದರೆ ಮೇ ತಿಂಗಳ 3ನೇ ತಾರೀಖಿನ ಶನಿವಾರದಂದು ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಕರ್ನಾಟಕ ಸರಕಾರದ ಮಾಜಿ ಸಚಿವ ಹಾಗೂ ಉಡುಪಿ ಚಿಕ್ಕಮಗಳೂರು
ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಆಗಮಿಸಲಿದ್ದಾರೆ. ಕ್ರೈಸ್ಟ್ ಕಿಂಗ್ ಚರ್ಚಿನ ಧರ್ಮಗುರುಗಳಾದ ರೆ.ಫಾ.ಕ್ಲೆಮೆಂಟ್ ಮಸ್ಕರೇನ್ಹಸ್ ಅವರು ಶುಭಾಶೀರ್ವಾದಗೈಯಲಿದ್ದಾರೆ, ಜೊತೆಗೆ ಕಾರ್ಕಳದ ಉದ್ಯಮಿಗಳಾದ ಬೋಳ ಪ್ರಶಾಂತ್ ಕಾಮತ್, ವಿವೇಕಾನಂದ ಶೆಣೈ,ಸ್ಕೌಟ್ಗೈಡ್ಸ್ ಉಪಾಧ್ಯಕ್ಷೆ ಶ್ರೀಮತಿ ಸಾವಿತ್ರಿ ಮನೋಹರ್, ಜೈನ್ ಮಿಲನ್ ಕಾರ್ಕಳ ಮಾಜಿ ಅಧ್ಯಕ್ಷೆ ಶ್ರೀಮತಿ ಮಾಲತಿ ವಸಂತ್ರಾಜ್, ಸಮಾಲೋಚಕಿ ಶ್ರೀಮತಿ ಹುಮೈರಾ ಅವರು ಅತಿಥಿಗಳಾಗಿ ಇರಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.





