
ಪರೀಕ್ಷೆ ಬರೆದ ಐದು ವಿದ್ಯಾರ್ಥಿಗಳಲ್ಲಿ ನಾಲ್ವರು ಉತ್ತೀರ್ಣ ಕಾರ್ಕಳ: ಭಾರತೀಯ ಕಂಪೆನಿ ಸೆಕ್ರೆಟರಿ ಮಂಡಳಿಯವರು ನಡೆಸಿದ ರಾಷ್ಟ್ರಮಟ್ಟದ ಕಂಪೆನಿ ಸೆಕ್ರೆಟರಿಯ ಪ್ರವೇಶ ಪರೀಕ್ಷೆ (ಸಿಎಸ್-ಇಇಟಿ)ಯಲ್ಲಿ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು ಪ್ರಥಮ
ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ. ಸಂಸ್ಥೆಯಿಂದ ಒಟ್ಟು ಐದು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ ನಾಲ್ಕು ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಸಂಸ್ಥೆಯು ಅಭೂತಪೂರ್ವ ಸಾಧನೆಗೈದಿದೆ. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ನಾರಾಯಣಿ ಕಿಣಿ(138/200), ಪವನ್ ಪೂಜಾರಿ(119/200), ಚರಣ್ರಾಜ್(118/200), ಶ್ರೇಯಸ್ ಆಚಾರ್ಯ(100/200) ಉತ್ತೀರ್ಣರಾದ ವಿದ್ಯಾರ್ಥಿಗಳಾಗಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳು ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಸಿಎ ಮತ್ತು ಸಿಎಸ್ ತರಬೇತಿ ತಂಡದಿಂದ ತರಬೇತಿ ಪಡೆದುಕೊಂಡಿದ್ದರು. ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಚಾರ್ಯರು, ತರಬೇತಿ ನೀಡಿದ ಉಪನ್ಯಾಸಕ ತಂಡ ಹಾಗೂ ಸಂಸ್ಥೆಯ ಬೋಧಕವರ್ಗದವರು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.



















