32.7 C
Udupi
Friday, April 10, 2026
spot_img
spot_img
HomeBlogಕ್ರೈಸ್ಟ್ ಕಿಂಗ್ : ದ್ವಿತೀಯ ಪಿಯುಸಿಯಲ್ಲಿ ಶೇ. 100 ಫಲಿತಾಂಶದೊಂದಿಗೆ,ರಾಜ್ಯದ ಅಗ್ರ ಹತ್ತರೊಳಗೆ 12 ವಿದ್ಯಾರ್ಥಿಗಳಿಗೆ...

ಕ್ರೈಸ್ಟ್ ಕಿಂಗ್ : ದ್ವಿತೀಯ ಪಿಯುಸಿಯಲ್ಲಿ ಶೇ. 100 ಫಲಿತಾಂಶದೊಂದಿಗೆ,ರಾಜ್ಯದ ಅಗ್ರ ಹತ್ತರೊಳಗೆ 12 ವಿದ್ಯಾರ್ಥಿಗಳಿಗೆ ಸ್ಥಾನ


ಕಾರ್ಕಳ: ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜು ದಾಖಲಾತಿಗೆ ಅಂಕಗಳ ಮಿತಿ ಇಲ್ಲದೆಯೂ ಮತ್ತೊಮ್ಮೆ ನೂರು ಶೇಖಡಾ ಫಲಿತಾಂಶದೊಂದಿಗೆ ಅಭೂತಪೂರ್ವ ಸಾಧನೆಯನ್ನು ಮಾಡಿದೆ.

ರಾಜ್ಯಮಟ್ಟದಲ್ಲಿ ಅಗ್ರ ಹತ್ತರೊಳಗೆ 12 ವಿದ್ಯಾರ್ಥಿಗಳು ಸ್ಥಾನ ಪಡೆದುಕೊಳ್ಳುವುದರ ಮೂಲಕ ಸಂಸ್ಥೆಯು ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದ ಪ್ರಜ್ವಲ್ ಶೆಟ್ಟಿ ಹಾಗೂ ಶ್ರೀಮಾ ದೇವಾಡಿಗ 596 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಜೊತೆಗೆ ಮದಿಹಾ ಫಾತಿಮಾ 594, ಜಿತೇಶ್ ಪಿಂಟೊ 593, ಮಹಿಪಾಲ್ ಸಿಂಗ್ 589 ಹಾಗೂ ಮನೋಜ್ ಪೈ 589 ಅಂಕಗಳನ್ನು ಪಡೆದುಕೊಂಡು ರಾಜ್ಯದ ಅಗ್ರ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸ್ಮೃತಿ ಮರಾಠೆ 592 ಅಂಕಗಳನ್ನು ಪಡೆದುಕೊಂಡಿದ್ದಾರೆ. ಸಿಯಾ ವೆನಿಶಾ ಡಿ’ಸೋಜ 591, , ವಿಜೇತ್ ಆರ್ ಶೆಟ್ಟಿಗಾರ್ 591, ಮೊಹಮ್ಮದ್ ಮಾಶಿದ್590, ರೋಶನ್ ಥೋರಸ್ 590 ಹಾಗೂ ಅಪೇಕ್ಷಾ ಜೈನ್ 589 ಅಂಕಗಳನ್ನು ಪಡೆದುಕೊಂಡು ರಾಜ್ಯದಲ್ಲಿ ಅಗ್ರ ಹತ್ತರೊಳಗೆ ಸ್ಥಾನ ಪಡೆದಿದ್ದಾರೆ. ಉಳಿದಂತೆ ವಾಣಿಜ್ಯ ವಿಭಾಗದಲ್ಲಿ ಒಟ್ಟು 123 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 94 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 29 ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 156 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 112 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 44 ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದುಕೊಂಡಿದ್ದಾರೆ. 149 ವಿದ್ಯಾರ್ಥಿಗಳು ಶೇಖಡಾ 90ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. ಉತ್ತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಗಿಂತ ಮೇಲೆಯೆ ಉತ್ತೀರ್ಣಗೊಂಡಿರುವುದು ಸಂಸ್ಥೆಯು ವಿಶಿಷ್ಟ ಸಾಧನೆಯಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page