
ಕಾರ್ಕಳ: ದ್ವಿತೀಯ ಪಿಯುಸಿ ಎರಡನೇ ವಾರ್ಷಿಕ ಪರೀಕ್ಷೆ ಫಲಿತಾಂಶ
ಪ್ರಕಟಗೊಂಡಿದ್ದು ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿ ಪೂರ್ವ
ಕಾಲೇಜಿನ ವಾಣಿಜ್ಯ ವಿಭಾಗದ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ
ಏಳನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಶ್ರೀದೀಪ ಇಂಗ್ಲೀಷ್ ಹಾಗೂ
ವ್ಯವಹಾರ ಅಧ್ಯಯನ ಪರೀಕ್ಷೆ ಬರೆದು ಅವುಗಳಲ್ಲಿ ಕ್ರಮವಾಗಿ 98
ಹಾಗೂ 99 ಅಂಕಗಳನ್ನು ಪಡೆದುಕೊಂಡು ಒಟ್ಟು 592 ಅಂಕ ಗಳಿಸಿ
ರಾಜ್ಯಕ್ಕೆ ಏಳನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ.
ಇನ್ನೋರ್ವ ವಿದ್ಯಾರ್ಥಿ ಪವನ್ ಇಂಗ್ಲೀಷ್ ಹಾಗೂ ಅರ್ಥಶಾಸ್ತç ಪರೀಕ್ಷೆ
ಬರೆದಿದ್ದು ಅವುಗಳಲ್ಲಿ ಕ್ರಮವಾಗಿ 94 ಹಾಗೂ 100 ಅಂಕಗಳನ್ನು
ಪಡೆದುಕೊAಡು ಒಟ್ಟು 592 ಅಂಕ ಗಳಿಸಿ ರಾಜ್ಯಕ್ಕೆ ಏಳನೇ ರ‍್ಯಾಂಕ್
ಪಡೆದುಕೊAಡಿದ್ದಾನೆ. ಈ ಮೂಲಕ ಕ್ರೈಸ್ಟ್ ಕಿಂಗ್ ಪದವಿ ಪೂರ್ವ
ಕಾಲೇಜು ಈ ವರ್ಷ ಅಗ್ರ ಹತ್ತು ರ‍್ಯಾಂಕ್‌ಗಳೊಳಗೆ ಒಟ್ಟು 10
ರಾಜ್ಯಮಟ್ಟದ ರ‍್ಯಾಂಕ್‌ಗಳನ್ನು ಗಳಿಸಿದಂತಾಗಿದೆ.