
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ
ಸಂಸ್ಥೆಯ ಪದವಿಪೂರ್ವ ಹಾಗೂ ಹತ್ತನೇ ತರಗತಿ
ವಿದ್ಯಾರ್ಥಿಗಳಿಗೆ ಕಲಿಕಾ ಒತ್ತಡ ನಿವಾರಣೆ ಕುರಿತ ಮಾಹಿತಿ ಹಾಗೂ
ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಉಡುಪಿಯ ವೈಕುಂಠ
ಬಾಳಿಗಾ ಆಸ್ಪತ್ರೆಯ ಮನೋರೋಗ ತಜ್ಞ ಹಾಗೂ ಆಪ್ತ
ಸಮಾಲೋಚಕರಾದ ಡಾ.ವಿರೂಪಾಕ್ಷ ದೇವರಮನೆ ಅವರು
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ವಿದ್ಯಾರ್ಥಿಗಳೊಂದಿಗೆ
ಸಂವಾದ ನಡೆಸಿ ಮಾತನಾಡಿದ ಅವರು “ಮಾನಸಿಕವಾಗಿ ಬಲಿಷ್ಟವಾಗಿರುವ
ಯುವಜನತೆ ದೇಶದ ಸಂಪತ್ತು. ವಿದ್ಯಾರ್ಥಿಗಳಿಗೆ ತಮ್ಮ ಗುರಿಯ
ಬಗ್ಗೆ ಸ್ಪಷ್ಟತೆಯಿರಬೇಕು ಮತ್ತು ಆ ಗುರಿ ಸಾಧಿಸಲು
ಅಗತ್ಯವಿರುವ ದಾರಿ ಕಂಡುಹಿಡಿಯಬೇಕು. ಮಕ್ಕಳಿಗೆ ತಮ್ಮ
ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ತಿಳಿದಿರಬೇಕು. ಅದಕ್ಕೆ
ಸರಿಯಾಗಿ ಕಾರ್ಯಯೋಜನೆ ಮಾಡಿಕೊಳ್ಳಬೇಕು” ಎಂದು
ಹೇಳಿದರು. ಸಂಸ್ಥೆಯ ಪದವಿಪೂರ್ವ ವಿಭಾಗದ ಪ್ರಾಚಾರ್ಯ
ಲಕ್ಷ್ಮೀ ನಾರಾಯಣ ಕಾಮತ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ
ಜೋಸ್ನಾ ಸ್ನೇಹಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣಿತಶಾಸ್ತ್ರ
ಉಪನ್ಯಾಸಕಿ ಶ್ರೀಮತಿ ಭಾರತಿ ನಾಯಕ್ ಕಾರ್ಯಕ್ರಮ ನಿರೂಪಿಸಿ
ನಿರ್ವಹಿಸಿದರು.















































